ಉಪ್ಪಿನಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪ ಟಿಪ್ಪರ್ ಮತ್ತು ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಮಹಿಳೆ ಮೃತಪಟ ಘಟನೆ ಮಂಗಳೂರು ಬೆಂಗಳೂರು ರಾಷ್ಡ್ರೀಯ ಹೆದ್ದಾರಿ ಪೆರ್ನೆಯಲ್ಲಿ ಸಂಭವಿಸಿದೆ.
ಸಾವನ್ನಪ್ಪಿದ ಮಹಿಳೆ ಪುತ್ತೂರು ಹಾರಾಡಿಯ ಪ್ರಜ್ವಲ್ ಸ್ಟೋರ್ಸ್ ನ ಮಾಲಕ ನೆಕ್ಕಿಲಾಡಿ ನಿವಾಸಿ ಬಾಲಕೃಷ್ಣ ಭಟ್ ಅವರ ಪತ್ನಿ ಪೂರ್ಣಿಮಾ(47) ಎಂದು ತಿಳಿದು ಬಂದಿದೆ.
ದಂಪತಿಗಳು ಇಂದು ಬೆಳಗ್ಗೆ ಪೆರ್ನೆಯಲ್ಲಿರುವ ತಮ್ಮ ತೋಟಕ್ಕೆ ತೆರಳಿ, ಅಲ್ಲಿಂದ ಹಿಂತಿರುಗುತ್ತಿದ್ದ ವೇಳೆ ಟಿಪ್ಪರ್ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಗಂಭೀರ ಗಾಯಗೊಂಡ ಬಾಲಕೃಷ್ಣ ಭಟ್ ಅವರ ಪತ್ನಿ ಪೂರ್ಣಿಮ ಸಾವನ್ನಪ್ಪಿದ್ದಾರೆ.
ಈ ಅಪಘಾತ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.