Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಜುಲೈ 1ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿರುವ “ಅಬ್ಬಬ್ಬ” ಕಾಮಿಡಿ ಚಿತ್ರ

ಬೆಂಗಳೂರು : ಕನ್ನಡ ಚಿತ್ರರಂಗದ ನಿರ್ದೇಶಕ  ಕೆಎಂ ಚೈತನ್ಯ “ಆ ದಿನಗಳು” ಚಿತ್ರದ ನಿರ್ದೇಶಿಸಿದ ಇವರು ಈ ಸಲ ಕಾಮಿಡಿ ಸಿನಿಮಾ ಜೊತೆ ಬಂದಿದ್ದಾರೆ.ಅವರು ನಿರ್ದೇಶಿಸಿರುವ ‘’ಅಬ್ಬಬ್ಬ’’ ಜುಲೈ 1ರಂದು ಬಿಡುಗಡೆಯಾಗಲಿದೆ. ಇಂಟರೆಸ್ಟಿಂಗ್‌ ಎಂದರೆ ಈ ಸಿನಿಮಾ ನಿರ್ಮಿಸಿದ್ದು ಮಲಯಾಳಂ ನಟಿ ಆ್ಯನ್‌ ಅಗಸ್ಟಿನ್‌. ಆ್ಯನ್‌ ಅಗಸ್ಟಿನ್‌ ಮತ್ತು ಜಾಹೀರಾತು ಸಿನಿಮಾಗಳ ನಿರ್ದೇಶಕ ವಿಕೇಕ್‌ ಥಾಮಸ್‌ ಸೇರಿಕೊಂಡು ಈ ಕನ್ನಡ ಸಿನಿಮಾ ನಿರ್ಮಾಣ ಮಾಡಿದ್ದಾರೆ.

“ಇದು ನನ್ನ ಒಂಭತ್ತನೇ ಸಿನಿಮಾ. ಕೊರೋನಾ ನಂತರದ ಈ ದಿನಗಳಲ್ಲಿ ಪ್ರತಿಯೊಬ್ಬರು ಸೆಕೆಂಡ್‌ ಇನ್ನಿಂಗ್ಸ್‌ ಶುರು ಮಾಡಿದ್ದಾರೆ. ಈ ಇನ್ನಿಂಗ್ಸ್‌ ನಗುವಿನ ಮೂಲಕ ಶುರು ಮಾಡೋಣ ಎಂದುಕೊಂಡು ಈ ಸಿನಿಮಾ ಮಾಡಿದ್ದೇನೆ. ಹಾಗೂ ಯುವಕರನ್ನು ಒಳಗೊಂಡಿರುವ ಕಾಮಿಡಿ ಸಿನಿಮಾ ಇದು. ಕಾಮಿಡಿ ಸಿನಿಮಾಗಳಲ್ಲಿ ನಟರು ಮತ್ತು ಸ್ಕ್ರಿಪ್ಟ್‌ ವರ್ಕ್‌ಗೆ ಬಹಳ ಪ್ರಾಮುಖ್ಯತೆ ಇರುತ್ತೆ. ಕೇವಲ ಟೆಕ್ನಿಕಲ್‌ ವರ್ಕ್‌ನಿಂದ ಜನರನ್ನು ನಗಿಸಲು ಸಾಧ್ಯವಿಲ್ಲ. ನಟ ಹೇಗೆ ನಟಿಸುತ್ತಾರೆ ಎನ್ನುವುದರ ಮೇಲೆ ಪ್ರೇಕ್ಷಕರು ನಗುತ್ತಾರೆ. ನಟರ ಜತೆ ಇಂಥ ಸಿನಿಮಾದಲ್ಲಿ ಕೆಲಸ ಮಾಡುವುದು ಚಾಲೆಂಜಿಂಗ್‌ ಕೆಲಸ’ ಎಂದರು ಕೆಎಂ ಚೈತನ್ಯ ಹೇಳಿದ್ದಾರೆ.

ಕೆ.ಎಂ. ಚೈತನ್ಯ ನಿರ್ದೇಶನದ ಕಾಮಿಡಿ ಚಿತ್ರದಲ್ಲಿ ಲಿಖಿತ್ ಶೆಟ್ಟಿ ಮತ್ತು ಅಮೃತಾ ಅಯ್ಯಂಗಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಚಿತ್ರದ ಪ್ರಮುಖ ಪಾತ್ರಧಾರಿ ಲಿಖಿತ್‌ ಶೆಟ್ಟಿ, ‘‘ಈ ಸಿನಿಮಾ ನನ್ನ ಕೆರಿಯರ್‌ನಲ್ಲಿ ತುಂಬಾ ದೊಡ್ಡ ಪಾತ್ರ ವಹಿಸಲಿದೆ’’ ಎಂದರು. ಇನ್ನು ಸಿನಿಮಾದ ಬಗ್ಗೆ  ಮಾತನಾಡಿದ ಶರತ್ ಲೋಹಿತಾಶ್ವ, ನಿರ್ದೇಶಕ ಕೆ ಎಂ ಚೈತನ್ಯ ನನಗೆ ಇಂತ ಪಾತ್ರ ಕೊಡ್ತಾರೆ ಅಂತ ಅಂದಿಕೊಂಡಿರಲಿಲ್ಲ. ವಿಭಿನ್ನವಾದ ಪಾತ್ರ ಇದಾಗಿದೆ. ತುಂಬಾ ಸ್ಟ್ರಿಕ್ಟ್ ಆಗಿರುವ ವ್ಯಕ್ತಿ ಸನ್ನಿವೇಶಗಳಿಗೆ ಸಿಲುಕಿಕೊಂಡು ಒದ್ದಾಡುವ ಪಾತ್ರ ಇದಾಗಿದೆ. ಹಾಸ್ಯಮಯವಾಗಿ ತೋರಿಸಿದ್ದಾರೆ ನಿರ್ದೇಶಕ ಚೈತನ್ಯ. ಇದುವರೆಗೂ ಮಾಡಿರುವ ಪಾತ್ರಗಳಲ್ಲೆ ಇದು ಬಹಳ ವಿಭಿನ್ನವಾಗಿದೆ ಎಂದು ಶರತ್ ಹೇಳಿದರು. ಹುಡುಗರ ಹಾಗೆ ನನ್ನನ್ನು ನಿರ್ದೇಶಕರು ಬಳಸಿಕೊಂಡಿದ್ದಾರೆ ಎಂದು ಶರತ್ ಲೋಹಿತಾಶ್ವ ಹೇಳಿದ್ದಾರೆ.

ನಾಯಕ ನಟಿ ಅಮೃತಾ ಅಯ್ಯಂಗಾರ್‌ ಅಬ್ಬಬ್ಬಾ ಸಿನಿಮಾ ಯೂತ್ಸ್‌ಗೆ ತುಂಬಾ ಇಷ್ಟವಾಗುತ್ತದೆ ಎಂದು ಹೇಳಿದ್ದಾರೆ, ಶರತ್‌ ಲೋಹಿತಾಶ್ವ, ಧನರಾಜ್‌, ತಾಂಡವ್‌, ವಿಜಯ್‌ ಚೆಂಡೂರು, ಸಂಗೀತ ನಿರ್ದೇಶಕ ದೀಪಕ್‌ ಅಲೆಕ್ಸಾಂಡರ್‌, ಡಿಓಪಿ ಮನೋಹರ್‌ ಜೋಷಿ, ಸಂಭಾಷಣೆಕಾರ ಕೆ ಎಲ್‌ ರಾಜಶೇಖರ್‌, ಒಂದು ವಿಶೇಷ ಹಾಡಿನ ರಚನಕಾರ ಆಲ್‌ಓಕೆ ಇದ್ದರು. ಈ ಚಿತ್ರಕ್ಕೆ ಧನಂಜಯ್‌ ಒಂದು ಹಾಡನ್ನು ಬರೆದಿದ್ದು, ವಸಿಷ್ಠ ಸಿಂಹ ಹಾಡಿದ್ದು ವಿಶೇಷ. ಪಿಆರ್‌ಕೆ ಸಂಸ್ಥೆ ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ. ಕೆಆರ್‌ಜಿ ಸಂಸ್ಥೆ ಸಿನಿಮಾ ವಿತರಣೆ ಮಾಡುತ್ತಿದೆ.

ನಾಯಕ ನಟ ಲಿಖಿತ್ ಶೆಟ್ಟಿಯವರ ಇದು ನಾಯಕನಾಗಿ‌ ಮೂರನೇ ಚಿತ್ರ.ಲಿಖಿತ್ ಶೆಟ್ಟಿಯವರ ನಾಯಕನಾಗಿ ನಟಿಸಿದ ಮೊದಲ ಚಿತ್ರ “ಸಂಕಷ್ಟಕರ ಗಣಪತಿ” ಉತ್ತಮವಾಗಿ ಮೂಡಿಬಂದು ಎಲ್ಲಾ ಮನಸ್ಸು ಗೆದಿತ್ತು.ನಂತರ ಪುನೀತ್ ರಾಜ್ ಕುಮಾರ ನಿರ್ಮಾಣದ “ಫ್ಯಾಮಿಲಿ ಪ್ಯಾಕ್” ಚಿತ್ರ‌ಕೂಡ ಒಳ್ಳೆಯ ಸದ್ದು ಮಾಡಿತ್ತು.ಅದರಲ್ಲಿ ಲಿಖಿತ್ ಗೆ ನಾಯಕಿಯಾಗಿ ಅಮೃತಾ ಅಯ್ಯಂಗಾರ್ ನಟಿಸಿದ್ದರು. ಈ ಜೋಡಿ ಈಗ ಅಬ್ಬಬ್ಬ ಚಿತ್ರದ ಪುನಃ ಜೊತೆಯಾಗಿ ನಟಿಸಿದ್ದಾರೆ. ಈ ಚಿತ್ರ ತಂಡ ಈಗ ಪ್ರಚಾರದಲ್ಲಿ ತೊಡಗಿದ್ದಾರೆ. ಜುಲೈ 1 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರ ತಂಡಕ್ಕೆ ಶುಭವಾಗಲಿ.

No Comments

Leave A Comment