Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

ಉಡುಪಿ: ಎಸಿಬಿ ರೈಡ್ – ಎಇ ಹರೀಶ್ ಮನೆಯಲ್ಲಿ ಚಿನ್ನದ ತಟ್ಟೆ ಸೇರಿ ಅಪಾರ ಪ್ರಮಾಣದ ಬಂಗಾರ ಪತ್ತೆ

ಉಡುಪಿ:ಜೂ 17. ಸಣ್ಣ ನೀರಾವರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಎಂಜಿನಿಯರ್ ಹರೀಶ್ ಅವರ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಜೂ 17ರ ಬೆಳ್ಳಂಬೆಳಿಗ್ಗೆ ದಾಳಿ ನಡೆಸಿದ್ದು, ಈ ವೇಳೆ ಚಿನ್ನದ ತಟ್ಟೆ ಸೇರಿದಂತೆ ಅಪಾರ ಪ್ರಮಾಣದ ಚಿನ್ನಾಭರಣಗಳು ಪತ್ತೆಯಾಗಿದೆ.

ಹರೀಶ್ ಮೇಲೆ ಸಾರ್ವಜನಿಕರಿಂದ ಎಸಿಬಿಗೆ ಹಲವು ದೂರುಗಳು ಬಂದಿರುವ ಹಿನ್ನಲೆಯಲ್ಲಿ ಇಂದು ಬೆಳಗ್ಗೆ ಕೊರಂಗ್ರಪಾಡಿ ನಿವಾಸದ ಮೇಲೆ ದಾಳಿ ನಡೆದಿದೆ.

ಈ ವೇಳೆ 5 ಲಕ್ಷ ರೂಪಾಯಿ ನಗದು, ದುಬಾರಿ ಬೆಲೆಯ ವಾಚುಗಳು, ಮೂರು ವಾಹನ ಚಿನ್ನದ ತಟ್ಟೆ, ಚಿನ್ನದ ತಗಡು, 15ಕ್ಕೂ ಹೆಚ್ಚು ಚಿನ್ನದ ಬಳೆ, 30ಕ್ಕೂ ಹೆಚ್ಚು ಸರ, ನೆಕ್ಲೆಸ್, ಬ್ರಾಸ್ಲೆಟ್, ಚಿನ್ನದ ಒಡವೆಗಳು, ದೇವರ ಮೂರ್ತಿ ಹಾಗೂ ಆಸ್ತಿ ಪತ್ರ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಡಿವೈಎಸ್ಪಿ ಮಂಜುನಾಥ ಕವರಿ ಸೇರಿದಂತೆ 15 ಅಧಿಕಾರಿಗಳ ತಂಡ ಮನೆ ಮೇಲೆ ದಾಳಿ ನಡೆಸಿದ್ದು, ಪರಿಶೀಲನೆ ಪ್ರಗತಿಯಲ್ಲಿದೆ.

No Comments

Leave A Comment