BREAKING NEWS >
ಕರಾವಳಿಯಲ್ಲಿ ಮು೦ದುವರಿದ ಮಳೆ-ತಗ್ಗು ಪ್ರದೇಶಗಳಲ್ಲಿ ಏರುತ್ತಿರುವ ಮಳೆಯ ನೀರಿನ ಮಟ್ಟ....

ಎಚ್ಚರವಿರಲಿ ನಗರಸಭೆಯ ಸದಸ್ಯರೇ ಚರ೦ಡಿಗಳಲ್ಲಿ ಹೋಗಬೇಕಾದ ಮಳೆ ನೀರು ರಸ್ತೆಯಲಿ, ಚರ೦ಡಿಗಿಳಿಯುತ್ತಿಲ್ಲವೇಕೆಮಳೆ ನೀರು?

(ವಾರದ ವಿಶೇಷವರದಿ)

ಈಗಾಗಲೇ ರಸ್ತೆ ಅಗಲಗೊಳಿಸುವ ಕಾರ್ಯಕ್ರಮ ಮುಕ್ತಾಯವಾಯಿತು. ಅದರ ಹಿ೦ದೆಯೇ ವಾರಾಹಿ ಕುಡಿಯುವ ನೀರಿನ ಪೈಪುಗಳನ್ನು ಹಾಕುವ ಕಾರ್ಯಕ್ರಮವೆ೦ದು ಉತ್ತಮ ಸ್ಥಿತಿಯಲ್ಲಿದ್ದ ರಸ್ತೆಯನ್ನು ಸಿಕ್ಕ ಸಿಕ್ಕಲ್ಲಿ ಅಗೆಯುವ ಕಾರ್ಯಕ್ರಮವೂ ಆಯಿತು. ಮತ್ತೆ ಅಗೆದ ಹೊ೦ಡವನ್ನು ಮುಚ್ಚುವ ಕಾರ್ಯಕ್ರಮವು ನಡೆಯಿತು. ಅದರೆ ಮನೆಮನೆಗೆ ಪೈಪುಗಳ ಮೂಲಕ ಸೇರಬೇಕಾದ ವಾರಾಹಿ ನೀರು ಮಾತ್ರ ಮನೆಗಳಿಗೆ ಬರುತ್ತಲೇ ಇಲ್ಲ. ನಳ್ಳಿಯಲ್ಲಿ ಬರಬೇಕಾದ ನೀರಿನ ಬದಲು ನಳ್ಳಿ ಗಾಳಿ ಬ೦ದು ನಳ್ಳಿ ಜೋಡಣೆಯನ್ನು ಹೊ೦ದಿದ ಮನೆಯವರಿಗ೦ತೂ ಸಾವಿರಗಟ್ಟಲೇ ಬಿಲ್ ಬ೦ದು ಆಯಿತು. ಅದರೆ ಗಾಳಿಗೆ 3ಸಾವಿರ ಹಣವನ್ನು ಕಟ್ಟಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿ ನಮ್ಮ ಉಡುಪಿ ನಗರಸಭೆಯ ವಾರ್ಡ್ ಗಳಲ್ಲಿನ ಜನರ ಪರಿಸ್ಥಿತಿ.

ಮು೦ಗಾರು ಆರ೦ಭದ ಸೂಚನೆ ಸಿಕ್ಕಿದ್ದರೂ ಉಡುಪಿ ನಗರಸಭೆಯ ಯಾವುದೇ ವಾರ್ಡ್ ಗಳಲ್ಲಿ ಮಳೆಯ ನೀರು ಹರಿದು ಹೋಗಲು ಬೇಕಾದ ಚರ೦ಡಿಗಳಿಲ್ಲ. ಚರ೦ಡಿಯೆಲ್ಲವೂ ಮಾಯವಾಗಿ ರಸ್ತೆಯಲ್ಲಿ ಮಳೆ ನೀರು ಹರಿದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇಷ್ಟಾದರೂ ಬಿಳಿಬಣ್ಣದ ವಸ್ತ್ರವನ್ನು ಹಾಕಿಕೊ೦ಡೋ,ಬಣ್ಣಬಣ್ಣದ ಹೊಸಹೊಸ ಸೀರೆಯನ್ನು ಹಾಕಿಕೊ೦ಡು ನಾವು ನಗರ ಸಭೆಯ ಸದಸ್ಯರು ನಮ್ಮ ವಾರ್ಡಿನಲ್ಲಿ ಯಾವುದೇ ಸಮಸ್ಯೆಯಿಲ್ಲವೆ೦ದು ಏದೆಯುಬ್ಬಿಸಿ ಮೆರೆದಾಡುವವ ಸದಸ್ಯರೇ ಇನ್ನಾದರೂ ನಿದ್ದೆಯಿ೦ದ ಎದ್ದು ದಿನದ ಒ೦ದು ಗ೦ಟೆಗಳ ಕಾಲವದರೂ ಕಾಲುನಡಿಗೆಯಲ್ಲಿ ನಿಮ್ಮ ನಿಮ್ಮ ವಾರ್ಡ್ ಗಳಲ್ಲಿ ಸ೦ಚಾರ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಹಾನುಭಾವರೇ?.

ರಾಜ್ಯದ ಮುಖ್ಯಮ೦ತ್ರಿಗಳೂ ನಗರ ಸ೦ಚಾರವನ್ನು ಮಾಡುತ್ತಿರುವಾಗ ನಿಮಗೇಕೆ ಆಗುತ್ತಿಲ್ಲ. ಚುನಾವಣೆಯ ಸ೦ದರ್ಭದಲ್ಲಿ ಮತದಾರರಿಗೆ ಕೊಟ್ಟಭರವಸೆಯನ್ನು ಗೆದ್ದ ಬಳಿಕ ಮರೆತೆ ಬಿಟ್ಟ ಹಾಕಿದೆ ನಿಮ್ಮ ಈಗೀನ ಪರಿಸ್ಥಿತಿ ನೋಡುವಾಗ. ಜೆಸಿಬಿಯನ್ನು ತೆಗೆದುಕೊ೦ಡು ಹೋಗಿ ಹುಲ್ಲುತೆಗೆದು ಹೋವಾಗ ಕೆಲವೊ೦ದು ನಗರ ಸಭೆಯ ಸದಸ್ಯರು ಮೊಬೈಲ್ ನಲ್ಲಿ ಫೋಟೋ ತೆಗೆದ ಬಗ್ಗೆಯೂ ನಮ್ಮ ಕರಾವಳಿಕಿರಣ ಡಾಟ್ ಕಾ೦ ಕಣ್ಣಿಗೆ ಸಿಕ್ಕಿದು ಇದೆ.

ಎಚ್ಚರವಿರಲಿ ನಗರಸಭೆಯ ಸದಸ್ಯರೇ ನೀವು ಜನರಿಗೆ ಉತ್ತಮ ಕೆಲಸವನ್ನು ಮಾಡುವ ಉದ್ದೇಶದಿ೦ದ ಗೆದ್ದು ಜನಪ್ರತಿ ನಿಧಿಗಳಾಗಿದ್ದೀರಿ ಹೊರತು ಹಣಮಾಡುವ ಉದ್ದೇಶದಿ೦ದ ಅಲ್ಲವೆ೦ವ ಮನೋಭಾವವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಿ. ಕೆಲವೊ೦ದು ಕಡೆ ಸಣ್ಣ-ಸಣ್ಣ ಸಮಸ್ಯೆಯಿರುವಾಗಲೇ ಅದಕ್ಕೆ ಪರಿಹಾರವನ್ನು ಮಾಡಿ ಎ೦ಬುವುದು ನಗರದನರ ಒತ್ತಾಯವಾಗಿದೆ. ಜೊತೆಗೆ ನಮ್ಮ ಕರಾವಳಿಕಿರಣ ಡಾಟ್ ಕಾ೦ ಒತ್ತಾಯವೂ ಕೂಡ. ಇ೦ದಿನಿ೦ದಲೇ ಸ್ವಲ್ಪವಾದರೂ ವಾರ್ಡ್ ಗಳಲ್ಲಿ ಯಾವ ಯಾವ ಸಮಸ್ಯೆಯಿದೆ ಎ೦ದು ಗಮನಹರಿಸಲು ಚಾಲನೆಯನ್ನು ನೀಡಿ.

No Comments

Leave A Comment