Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಬಿಸಿಯೂಟ ತಯಾರಿಸುತ್ತಿದ್ದ ಸಂದರ್ಭ ಸಾಂಬಾರ್‌ ಪಾತ್ರೆಗೆ ಕಾಲು ಜಾರಿ ಬಿದ್ದು ಮಹಿಳೆಯೋರ್ವರು ಸಾವು

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸಮೀಪ ಬಿಸಿಯೂಟ ತಯಾರಿಸುತ್ತಿದ್ದ ಸಂದರ್ಭ ಸಾಂಬಾರ್‌ ಪಾತ್ರೆಗೆ ಕಾಲು ಜಾರಿ ಬಿದ್ದು ಮಹಿಳೆಯೋರ್ವರು ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಸಂಭವಿಸಿದೆ.

ಸಾವನ್ನಪ್ಪಿದ ಮಹಿಳೆ ಪುತ್ತೂರು ತಾಲೂಕು ಕುರಿಯ ಗ್ರಾಮ ಮಲಾರು ಮನೆ ನಿವಾಸಿ ಜಾರ್ಜ್ ಪ್ರಸನ್ನ ಡಿ’ಸೋಜ ಅವರ ಪತ್ನಿ  ಅಗ್ನೆಸ್ ಪ್ರಮೀಳಾ ಡಿಸೋಜಾ (37) ಎಂದು ತಿಳಿದು ಬಂದಿದೆ.

ಘಟನೆ ಸ್ಥಳಕ್ಕೆ ಪುತ್ತೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
No Comments

Leave A Comment