Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ವಿದ್ಯೋದಯ ಪದವಿ ಪೂರ್ವಕಾಲೇಜು, ಉಡುಪಿ : ಪ್ರಥಮ ಪಿಯುಸಿ ಪ್ರಾರಂಭೋತ್ಸವ -ಆದರ್ಶ ವ್ಯಕ್ತಿಗಳ ಗುಣಗಳನ್ನು ಮೈಗೂಡಿಸಿಕೊಳ್ಳಿ

ಉಡುಪಿ: ನಿರಂತರ ಸಾಧನೆಯನ್ನೇ ಧ್ಯೇಯವನ್ನಾಗಿಸಿಕೊಂಡು ಯಶಸ್ವಿಯಾಗಿ ಮುನ್ನೆಡೆಯುತ್ತಿರುವ ಶೇಕಡಾ 100ರ ಫಲಿತಾಂಶದೊಂದಿಗೆ ಸಾಂಸ್ಕೃತಿಕ-ಕ್ರೀಡಾ ಕ್ಷೇತ್ರಗಳಲ್ಲೂ ರಾಜ್ಯ-ರಾಷ್ಟ್ರ ಮಟ್ಟಗಳಲ್ಲಿ ಗುರುತಿಸಲ್ಪಡುತ್ತಿರುವಕರ್ನಾಟಕದ ಪ್ರತಿಷ್ಠಿತ ವಿದ್ಯಾಸಂಸ್ಥೆಉಡುಪಿಯ ವಿದ್ಯೋದಯಟ್ರಸ್ಟ್‍ನ ಅಂಗ ಸಂಸ್ಥೆ ವಿದ್ಯೋದಯ ಪದವಿ ಪೂರ್ವಕಾಲೇಜಿನಲ್ಲಿ ಪ್ರಸಕ್ತ ಸಾಲಿನ ಪ್ರಥಮ ಪಿಯುಸಿಯ ಪ್ರಾರಂಭೋತ್ಸವವು13 ಮೇ 2022 ರಂದು ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ, ಸಂಪನ್ಮೂಲ ವ್ಯಕ್ತಿಯಾಗಿಪೆÇ್ರ. ಎಂ. ಬಾಲಕೃಷ್ಣ ಶೆಟ್ಟಿ, ಪ್ರಾಂಶುಪಾಲರು, ರಾಮಕೃಷ್ಣಕಾಲೇಜು, ಮಂಗಳೂರು ಇವರುವಿದ್ಯಾರ್ಥಿಗಳನ್ನುದ್ದೇಶಿಸಿ ಮೇಲಿನಂತೆ ಹಿತವಚನ ನುಡಿಯುತ್ತಾ ಸಾಧನೆಯನ್ನೇ ಜೀವಾಳವನ್ನಾಗಿಸಿಕೊಳ್ಳಲುಇವತ್ತಿನ ವಿದ್ಯಾರ್ಥಿ ಸಮೂಹಕ್ಕೆ ಅವಶ್ಯವೆನಿಸಿದ ಛಲ, ಸ್ಥಿರತೆ, ಏಕಾಗ್ರತೆ ಮತ್ತುಸಮತೋಲನದ ಬದುಕನ್ನುಕಂಡುಕೊಳ್ಳುವ ಬಗೆಯನ್ನು ವಿವರಿಸಿದರು.

ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಕೆ. ಗಣೇಶ್‍ರಾವ್‍ಅವರು ಈ ಸಮಾರಂಭದಅಧ್ಯಕ್ಷರಾಗಿದ್ದು ಶಿಸ್ತು-ಸಂಯಮ-ಸಂಸ್ಕಾರಗಳು ವಿದ್ಯಾರ್ಥಿಯಕಲಿಕೆಯಲ್ಲಿ ಮಹತ್ತರ ಪಾತ್ರವಹಿಸುವ ಬಗ್ಗೆ ತಿಳಿಸಿದರು.

ಸಂಸ್ಥೆಯ ಈ ಹಿಂದಿನ ವಿದ್ಯಾರ್ಥಿಗಳ ಸಾಧನೆಗಳ ಬಗ್ಗೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸಂದೀಪ್‍ಕುಮಾರ್‍ಮೆಚ್ಚುಗೆಯ ಮಾತುಗಳನ್ನಾಡಿ ಈ ಸಾಲಿನ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿಎಲ್ಲಾ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದ ಈ ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲೆ ಶ್ರೀಮತಿ ರಂಜನಾ ಕೆ. ಸ್ವಾಗತಿಸಿ, ಸಂಸ್ಕೃತಉಪನ್ಯಾಸಕ ಶಿವಪ್ರಸಾದ ಭಟ್ ವಂದಿಸಿ, ಹಿಂದಿ ಉಪನ್ಯಾಸಕಿ ಶ್ರೀಮತಿ ವಿಜಯಲಕ್ಷ್ಮೀ ನಿರ್ವಹಿಸಿದರು.

No Comments

Leave A Comment