BREAKING NEWS >
'ಶಾಸಕರ ಸಂಖ್ಯಾಬಲ ಯಾವ ಕ್ಷಣದಲ್ಲಿಯೂ ಬದಲಾಗಬಹುದು, ಸದನ ಪರೀಕ್ಷೆಯಲ್ಲಿ ಗೆದ್ದೇ ಗೆಲ್ಲುತ್ತೇವೆ': ಸಂಜಯ್ ರಾವತ್...ಅಸ್ಸಾಂ ಪ್ರವಾಹ ಪರಿಸ್ಥಿತಿ ಮತ್ತಷ್ಟು ಗಂಭೀರ; ನೀರಿನಲ್ಲಿ ಮುಳುಗಿದ ಸಿಲ್ಚಾರ್; ಸಾವಿನ ಸಂಖ್ಯೆ 108ಕ್ಕೆ ಏರಿಕೆ...

ನೋಟಿಸ್​​ ನೀಡಲು ಬಂದ ಮಹಿಳಾ ಪಿಎಸ್​​ಐಗೆ ಖಾರದ ಪುಡಿ ಎರಚಿ ಹಲ್ಲೆಗೆ ಯತ್ನ – ದೂರು ದಾಖಲು

ಬೀದರ್:ಜೂ 10. ರೌಡಿ ಶೀಟರ್​​ಗೆ ನೋಟಿಸ್ ನೀಡಲು ಹೋದ ಮಹಿಳಾ ಪಿಎಸ್​​ಐ ಮೇಲೆ ಹಲ್ಲೆ ನಡೆಸಿರುವ ಘಟನೆ ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ತೋರಣ ಗ್ರಾಮದಲ್ಲಿ ನಡೆದಿದೆ.

ರೌಡಿಶೀಟರ್​ಗೆ ನೊಟೀಸ್​ ನೀಡಲು ತೆರಳಿದ್ದ ವೇಳೆ ಕಮಲನಗರದ ಪಿಎಸ್​​ಐ ನಂದಿನಿ ಸೇರಿದಂತೆ ಮೂವರು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.

ಇನ್ನು ರೌಡಿಶೀಟರ್​ ಜತೆಗೆ ಆತನ ಸಹಚರರು ಸೇರಿ ಒಟ್ಟು ಆರು ಮಂದಿ ಈ ಕೃತ್ಯದಲ್ಲಿ ಭಾಗಿಯಾಗಿದ್ದು, ದೊಣ್ಣೆ ಮಾತ್ರವಲ್ಲದೇ ಖಾರದಪುಡಿಯನ್ನೂ ಎರಚಿ ಪೊಲೀಸರಿಗೆ ಥಳಿಸಲು ಯತ್ನಿಸಿರುವ ಘಟನೆ ನಡೆದಿದೆ.

ಈ ಬಗ್ಗೆ ಕಮಲನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

No Comments

Leave A Comment