ಮುರುಡೇಶ್ವರ ಸಮುದ್ರದಲ್ಲಿ ಮುಳುಗಿ ಇಬ್ಬರು ಪ್ರವಾಸಿಗರು ಸಾವು
ಮುರುಡೇಶ್ವರ : ಭಟ್ಕಳ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮುರುಡೇಶ್ವರ ಸಮುದ್ರದಲ್ಲಿ ಇಬ್ಬರು ಪ್ರವಾಸಿಗರು ಮುಳುಗಿ ನಾಪತ್ತೆಯಾಗಿದ್ದು ಮೂವರನ್ನು ರಕ್ಷಿಸಿದ ಘಟನೆ ಗುರುವಾರ ಸಂಜೆ ನಡೆದಿದೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರದಿಂದ 12 ಯುವಕರ ತಂಡ ಪ್ರವಾಸಕ್ಕೆಂದು ಮುರುಢೇಶ್ವರಕ್ಕೆ ಬಂದಿದ್ದು, ಅವರಲ್ಲಿ ಅಬ್ರಾರ್ ಶೇಖ್ (21) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದರೆ, ಶಿವಮೊಗ್ಗ ಜಿಲ್ಲೆಯ ಆಗೊಂಬೆಯಿAದ ಪ್ರವಾಸಕ್ಕೆ ಬಂದಿದ್ದ ಒಂದೇ ಕುಟುಂಬದ ಮೂವರು ಸದಸ್ಯರಲ್ಲಿ ಸುಶಾಂತ ಎಂ.ಎಸ್. (23) ಎಂಬ ಯುವಕ ಸಮುದ್ರಪಾಲಾಗಿದ್ದಾನೆ ಎಂದು ಮುರುಡೇಶ್ವರ ಪೊಲೀಸರು ಮಾಹಿತಿ ನೀಡಿದ್ದಾರೆ.
ಶ್ರೀನಿವಾಸ್‌ಪುರದ 12ಯುವಕರು ಗುರುವಾರ ಸಂಜೆ ಮುರುಡೇಶ್ವರ ಸಮುದ್ರದಲ್ಲಿ ಈಜುತ್ತಿದ್ದಾಗ ಇದ್ದಕ್ಕಿದ್ದಂತೆ ದೊಡ್ಡ ಅಲೆಯೊಂದು ಬಂದು ಮೂವರನ್ನು ಸೆಳೆದುಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರಲ್ಲಿ ಇಬ್ಬರು ಯುವಕರನ್ನು ರಕ್ಷಿಸಿದ್ದು, ಅಬ್ರಾರ್ ಶೇಖ್ ಎಂಬಾತನು ಅಲೆಗಳ ನಡುವೆ ಕಣ್ಮರೆಯಾಗಿದ್ದಾನೆ. ಅದೇ ರೀತಿ ಆಗೊಂಬೆಯ ಒಂದೇ ಕುಟುಂಬದ ಮೂವರು ಸಮುದ್ರದಲ್ಲಿ ಈಜಾಡುತ್ತಿದ್ದಾಗ ಸುಶಾಂತ್ ಮತ್ತು ಆತನ ಚಿಕ್ಕಪ್ಪ ಅಲೆಗಳಲ್ಲಿ ಮುಳುಗಲು ಆರಂಭಿಸಿದರು. ಈ ಸರ‍್ಭದಲ್ಲಿ ಸ್ಥಳೀಯ ಮೀನುಗಾರರು ಸುಶಾಂತ್ನ ಚಿಕ್ಕಪ್ಪನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ, ಆದರೆ ಸುಶಾಂತ್ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ. ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿರುವ ಇಬ್ಬರು ಯುವಕರಿಗಾಗಿ ಶೋಧ ಕರ‍್ಯ ನಡೆಯುತ್ತಿದೆ.
ಘಟನೆಗೆ ಸಂಬAಧಿಸಿದAತೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ಸ್ಪೆಕ್ಟರ್ ಮಹಾಬಲೇಶ್ವರ ನಾಯ್ಕ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ.