BREAKING NEWS >
'ಶಾಸಕರ ಸಂಖ್ಯಾಬಲ ಯಾವ ಕ್ಷಣದಲ್ಲಿಯೂ ಬದಲಾಗಬಹುದು, ಸದನ ಪರೀಕ್ಷೆಯಲ್ಲಿ ಗೆದ್ದೇ ಗೆಲ್ಲುತ್ತೇವೆ': ಸಂಜಯ್ ರಾವತ್...ಅಸ್ಸಾಂ ಪ್ರವಾಹ ಪರಿಸ್ಥಿತಿ ಮತ್ತಷ್ಟು ಗಂಭೀರ; ನೀರಿನಲ್ಲಿ ಮುಳುಗಿದ ಸಿಲ್ಚಾರ್; ಸಾವಿನ ಸಂಖ್ಯೆ 108ಕ್ಕೆ ಏರಿಕೆ...

ವಿಟ್ಲ: ಲಾರಿ ಹರಿದು ಪಾದಚಾರಿ ಸ್ಥಳದಲ್ಲೇ ಸಾವು

ವಿಟ್ಲ:ಜೂ 10. ಲಾರಿ ಹರಿದು ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ವಿಟ್ಲ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಸಮೀಪ ಜೂ.10 ರ ಶುಕ್ರವಾರ ನಡೆದಿದೆ.

ಮೃತರನ್ನು ಪೆರುವಾಯಿ ಗ್ರಾಮದ ಕಡಂಬು ನಿವಾಸಿ ನಾರಾಯಣ ಕೊಡಂಗೆ ಎಂದು ಗುರುತಿಸಲಾಗಿದೆ. ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

ಲಾರಿ ಕಲ್ಲಡ್ಕ – ಕಾಂಞಂಗಾಡ್ ರಸ್ತೆಯಲ್ಲಿ ಉಕ್ಕುಡ ಕಡೆಯಿಂದ ವಿಟ್ಲ ಕಡೆ ತೆರಳುತ್ತಿರುವ ವೇಳೆ ಅವಘಡ ಸಂಭವಿಸಿದೆ. ವಿಟ್ಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

No Comments

Leave A Comment