BREAKING NEWS >
ಕರಾವಳಿಯಲ್ಲಿ ಮು೦ದುವರಿದ ಮಳೆ-ತಗ್ಗು ಪ್ರದೇಶಗಳಲ್ಲಿ ಏರುತ್ತಿರುವ ಮಳೆಯ ನೀರಿನ ಮಟ್ಟ....

ಕುಂದಾಪುರ: ವೈದ್ಯರ ಕ್ಲಿನಿಕ್ ಇಲಾಖಾ ತನಿಖೆ – 7ಕ್ಲಿನಿಕ್‌ಗಳ ಮೇಲೆ ಎಫ್ ಐ ಆರ್ ದಾಖಲು

ಕುಂದಾಪುರ: ಜೂ 10 . ಅಲೋಪತಿ ಔಷಧ ನೀಡುತ್ತಿದ್ದಾರೆ ಎಂಬ ಅರೋಪದ ಮೇಲೆ 11 ಮಂದಿ ಆಯುರ್ವೇದ ವೈದ್ಯರ ಕ್ಲಿನಿಕ್ ಗಳಲ್ಲಿ ತನಿಖೆ ನಡೆಸಲಾಗಿದೆ.

ಕುಂದಾಪುರದ ಸಾಮಾಜಿಕ ಕಾರ್ಯಕರ್ತ ಕಿರಣ್‌ ಪೂಜಾರಿ ನೀಡಿದ ದೂರಿನನ್ವಯ ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗಭೂಷಣ್‌ ಉಡುಪ ಅವರು ತನಿಖೆಗೆ ಆದೇಶಿಸಿದ್ದಾರೆ.

ದೂರಿನ ಹಿನ್ನಲೆಯಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲೂಕಿನ 11 ಮಂದಿಯ ಕ್ಲಿನಿಕ್‌ ವಿರುದ್ಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಆದೇಶ ನೀಡಿದ್ದರು. ಇದಾದ ಬಳಿಕ ತಾಲೂಕು ಪ್ರಾಧಿಕೃತ ಅಧಿಕಾರಿಗಳ ನೇತೃತ್ವದ ತಂಡ 11 ಕ್ಲಿನಿಕ್‌ಗಳಲ್ಲಿ ತನಿಖೆ ನಡೆಸಿದೆ. ಈ ಪೈಕಿ 7 ಕ್ಲಿನಿಕ್‌ಗಳ ಮೇಲೆ ಎಫ್ ಐ ಆರ್ ದಾಖಲಿಸಲಾಗಿದೆ.

No Comments

Leave A Comment