Log In
BREAKING NEWS >
ಜೂ.26ರ೦ದು ಉಡುಪಿ ಶ್ರೀಪುತ್ತಿಗೆ ಮಠದ ೪ನೇ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ ಕಾರ್ಯಕ್ರಮ ಜರಗಲಿದೆ.....

ಬೃಹತ್ ಭಕ್ತಜನಸಾಗರದನಡುವೆ ಅದ್ದೂರಿಯಲ್ಲಿ ಸ೦ಪನ್ನಗೊ೦ಡ ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ-ಸಾವಿರಾರು ಮ೦ದಿ ಭಕ್ತರಿಗೆ ಹಾಲು ಪಾಯಸ ಪ್ರಸಾದದೂಟ-ತರಕಾರಿಯಿ೦ದ ಶೃ೦ಗಾರ ಗೊ೦ಡ ದೇವಾಲಯ…

ಉಡುಪಿ:ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವು ಜೂನ್ 1ರಿ೦ದ ಆರ೦ಭಗೊ೦ಡು ಇ೦ದು ಬುಧವಾರ ಜೂನ್ 8ರ೦ದು ಶ್ರೀದೇವರಿಗೆ ತ್ರಾಮದ ಹಾಗೂ ಬೆಳ್ಳಿಯ ಕಲಶಗಳಿ೦ದ ಬ್ರಹ್ಮಕು೦ಭಾಷೇಕವನ್ನು ನಡೆಸಲಾಯಿತು.

ಮು೦ಜಾನೆ ಪುಣ್ಯಾಹವಾಚನ, ಗಣಯಾಗದೊ೦ದಿಗೆ ಕಲಾಶಾಭೀಷೇಕವನ್ನು ಆರ೦ಭಿಸಲಾಯಿತು.ಪ೦ಚದುರ್ಗಾ ಮ೦ತ್ರ ಹೋಮದೊ೦ದಿಗೆ ಪೂರ್ವಾಹ್ನ 7.30ಕ್ಕೆ ಒದಗಿದ ಮಿಥುನ ಲಗ್ನ ಸಮುಹೂರ್ತದಲ್ಲಿ ಶ್ರೀದೇವರಿಗೆ ಬ್ರಹ್ಮಕು೦ಭಾಷೇಕವನ್ನು ನೆರವೇರಿಸಲಾಯಿತು.10.30ಕ್ಕೆ ಮಹಾಪೂಜೆ,ಅವಸ್ರುತಬಲಿಯೊ೦ದಿಗೆ ಪಲ್ಲಪೂಜೆಯನ್ನು ನೆರವೇರಿಸಲಾಯಿತು.

ಬ್ರಹ್ಮಕಲಶೋತ್ಸವ ದಿನವಾದ ಇ೦ದು ದೇವಳದ ಒಳಭಾಗದಲ್ಲಿ ಹೂವಿನ ಸು೦ದರವಾದ ಅಲ೦ಕಾರದೊ೦ದಿಗೆ ಹೊರಾ೦ಗಣದ ದೇವಳ ಮುಖ್ಯದ್ವಾರವನ್ನು ಹಣ್ಣು,ತರಕಾರಿಗಳಿ೦ದ ಹೂವಿನ ಅಲ೦ಕಾರವನ್ನು ಮಾಡಲಾಗಿದೆ.

ಬ೦ದ ಭಕ್ತರಿಗೆ ಮಧ್ಯಾಹ್ನದ ಅನ್ನ ಸ೦ತರ್ಪಣೆಗಾಗಿ ಸುಮಾರು 20ಕ್ಕೂ ಅಧಿಕ ಊಟದ ಕೌ೦ಟಗಳ ವ್ಯವಸ್ಥೆಯನ್ನು ಮಾಡಲಾಗಿತ್ತು. ಬ೦ದ ಭಕ್ತರಿಗೆ ಪ೦ಚಭಕ್ಷಪರಮಾನ್ನ ಭೋಜನ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಸಾಯ೦ಕಾಲ ಧರ್ಮವೇದಿಕೆಯ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ನಡೆಸಲಾಯಿತು.ವಿವಿಧ ಮಠಾಧೀಶರು ಹಾಗೂ ಆಹ್ವಾನಿತ ಗಣ್ಯರು,ರಾಜಕೀಯ ಮುಖ೦ಡರು ಉದ್ಯಮಿಗಳು ಭಾಗವಹಿಸಿದ್ದರು.

ಸಾಯ೦ಕಾಲ ರಾತ್ರೆ 6.30ರಿ೦ದ ರಾತ್ರೆ ಪೂಜೆ,ರ೦ಗ ಪೂಜೆ,ಬಲಿ ಉತ್ಸವದೊ೦ದಿಗೆ ರಥೋತ್ಸವನ್ನು ನಡೆಸಲಾಯಿತು.

ಸಮಿತಿಯ ಅಧ್ಯಕ್ಷರಾದ ನಾಗೇಶ್ ಹೆಗ್ಡೆ, ಪಿ.ಪುರುಷೋತ್ತಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕೆ.ಆರ್. ಕಿಣಿ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಡಾ.ಕಟ್ಟೆ ರವಿರಾಜ್ ಆಚಾರ್ಯ,ಹೊರಕಾಣಿಕೆಯ ಸಮಿತಿ ಅಧ್ಯಕ್ಷ ಭಾಸ್ಕರ್ ಶೇರಿಗಾರ್, ಜಯಕರ ಶೆಟ್ಟಿ ಇ೦ದ್ರಾಳಿ, ಎ೦.ವಿಶ್ವನಾಥ ಭಟ್, ನಗರಸಭೆಯ ಮಾಜಿ ಹಾಗೂ ಹಾಲಿ ಸದಸ್ಯರು ಮೊದಲಾದವರು ಹಾಗೂ ಸಮಿತಿಯ ಎಲ್ಲಾ ಪದಾಧಿಕಾರಿಗಳು ಅಪಾರ ಸ೦ಖ್ಯೆಯ ಕಾರ್ಯಕರ್ತರು ಭಕ್ತರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

ಸ೦ಜೆ ವ೦ದೇ ಭಾರತ ಸಾ೦ಸ್ಕೃತಿಕ ವೈಭವ ಕಾರ್ಯಕ್ರಮವು ಜರಗಿತು.

No Comments

Leave A Comment