Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ನೈಜೀರಿಯಾ: ಸಾಮೂಹಿಕ ಪ್ರಾರ್ಥನೆ ವೇಳೆ ಚರ್ಚ್‌ಗೆ ನುಗ್ಗಿ ಗುಂಡಿನ ದಾಳಿ, 50 ಮಂದಿ ಸಾವು

ಲಾಗೋಸ್: ನೈರುತ್ಯ ನೈಜೀರಿಯಾದಲ್ಲಿ ಭಾನುವಾರ ಕ್ಯಾಥೋಲಿಕ್ ಚರ್ಚ್ ಗೆ ನುಗ್ಗಿದ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದು, ಕನಿಷ್ಠ 50 ಮಂದಿ ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಂದೂಕುಧಾರಿಗಳು ಕ್ಯಾಥೋಲಿಕ್ ಚರ್ಚ್‌ ನಲ್ಲಿ ಸಾಮೂಹಿಕ ಪ್ರಾರ್ಥನೆಗೆ ಸೇರಿದ್ದವರ ಮೇಲೆ ಗುಂಡು ಹಾರಿಸಿದ್ದು, ಘಟನೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವರು ಮೃತಪಟ್ಟಿದ್ದಾರೆ ಎಂದು ಸರ್ಕಾರ ಮತ್ತು ಪೊಲೀಸರು ತಿಳಿಸಿದ್ದಾರೆ.

ಒಂಡೋ ರಾಜ್ಯದ ಓವೊ ಪಟ್ಟಣದಲ್ಲಿರುವ ಸೇಂಟ್ ಫ್ರಾನ್ಸಿಸ್ ಕ್ಯಾಥೋಲಿಕ್ ಚರ್ಚ್‌ನಲ್ಲಿ ಬಂದೂಕುಧಾರಿಗಳು ಗುಂಡು ಹಾರಿಸಿದ ಬಳಿಕ ಸ್ಫೋಟಕಗಳನ್ನು ಬಳಸಿ ದಾಳಿ ನಡೆಸಿದ್ದಾರೆ.

ಈ ದಾಳಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ ಮತ್ತು ದಾಳಿಯ ಹೊಣೆಯನ್ನು ಇದುವರೆಗೂ ಯಾವ ಸಂಘಟನೆಯೂ ಹೊತ್ತುಕೊಂಡಿಲ್ಲ.

ನೈಜೀರಿಯಾದ ಕ್ಯಾಥೋಲಿಕ್ ಚರ್ಚ್‌ನ ವಕ್ತಾರ ರೆವರೆಂಡ್ ಆಗಸ್ಟೀನ್ ಇಕ್ವು ಈ ಬಗ್ಗೆ ಮಾತನಾಡಿದ್ದು, ಪವಿತ್ರ ಪೂಜೆ ನಡೆಯುತ್ತಿದ್ದಾಗ ಅಪರಿಚಿತ ಬಂದೂಕುಧಾರಿಗಳು ಸೇಂಟ್ ಫ್ರಾನ್ಸಿಸ್ ಕ್ಯಾಥೋಲಿಕ್ ಚರ್ಚ್ ಮೇಲೆ ದಾಳಿ ನಡೆಸಿರುವುದು ತುಂಬಾ ದುಃಖಕರವಾಗಿದೆ. ಬಿಷಪ್‌ಗಳು ಮತ್ತು ಪಾದ್ರಿಗಳು ಕೂದಲೆಳೆ ಅಂತರದಲ್ಲಿ ಬದುಕುಳಿದಿದ್ದಾರೆ ಎಂದು ಹೇಳಿದ್ದಾರೆ.

No Comments

Leave A Comment