ಮಲ್ಪೆ ಸಮುದ್ರದ ನೀರಿನಲ್ಲಿ ಮುಳುಗುತ್ತಿರುವ ನಾಲ್ವರು ಯುವಕರನ್ನು ರಕ್ಷಿಸಿದ ಲೈಫ್ ಗಾರ್ಡ್ಸ್
ಮಲ್ಪೆ : ಉಡುಪಿ ಜಿಲ್ಲೆಯ ಮಲ್ಪೆಯ ಬೀಚ್ ನಲ್ಲಿ ಪ್ರವಾಸಕ್ಕೆಂದು ಯುವಕರ ತಂಡದಿಂದ ಬಂದ ನಾಲ್ವರು ಯುವಕರು ಸಮುದ್ರದ ನೀರಿನಲ್ಲಿ ಮುಳುಗುವಾಗ ಲೈಫ್ ಗಾರ್ಡ್ಸ್ ಅವರನ್ನು ರಕ್ಷಣೆ ಮಾಡಿದ ಘಟನೆ ಇಂದು ನಡೆದಿದೆ.
ಬಿಜಾಪುರದಿಂದ ನಾಲ್ವರು ಯುವಕರು ಪ್ರವಾಸಕ್ಕೆ ಬಂದಿದ್ದರು, ಅದರಲ್ಲಿ ಮುಬಿನ್ ಹಾಗೂ ಸೋಫಿಯಾ, ಅಹ್ಮದ್,ಮೊಹಮ್ಮದ್ ಎಂಬವರನ್ನು ಮಲ್ಪೆ ಬೀಚ್ ನ ಲೈಫ್ ಗಾರ್ಡ್ಸ್ ತಂಡ ರಕ್ಷಿಸಿದ್ದಾರೆ.
ನಿನ್ನೆ ಇಬ್ಬರನ್ನು ಹಾಗೂ ಇಂದು ನಾಲ್ವರನ್ನು ನೀರಿನಲ್ಲಿ ಮುಳುಗುವವರನ್ನು ಮಲ್ಪೆ ಬೀಚ್ ಲೈಫ್ ಗಾರ್ಡ್ಸ್ ತಂಡ ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.