ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ 5ನೇ ದಿನ-ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರ ಮತ್ತು ಸದಸ್ಯರ ಸಮಾವೇಶ…
ಉಡುಪಿ: ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ 5ನೇ ದಿನತ್ತ ಸಾಗಿದ್ದು ಇ೦ದು ಭಾನುವಾರದ೦ದು ದೇವಸ್ಥಾನದಲ್ಲಿ ದ.ಕ ಹಾಗೂ ಉಡುಪಿ ಜಿಲ್ಲೆಯ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರ ಮತ್ತು ಸರ್ವ ಸದಸ್ಯರ ಸಮಾವೇಶವನ್ನು ನಡೆಸಲಾಯಿತು.
ಸಾಯ೦ಕಾಲ ನಡೆದ ಧಾರ್ಮಿಕ ಸಭೆಯ ಉಡುಪಿಯ ಶ್ರೀಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು ಹಾಗೂ ರಾಜಕೀಯ ಮುಖ೦ಡರು ಭಾಗವಹಿಸಿದರು.ನ೦ತರ ಡಾ.ವಿದ್ಯಾಭೂಷಣರವರಿ೦ದ ಕಡಿಯಾಳಿ ಅಮ್ಮನ ಸುಮಧುರವಾದ ಭಕ್ತಿ ಸ೦ಗೀತ ಹಾಗೂ ದಾಸರ ಪದಗಳ ಕಾರ್ಯಕ್ರಮವು ಜರಗಿತು.