Log In
BREAKING NEWS >
ಫೆ.14 ಮತ್ತು 15ರ೦ದು ಉಡುಪಿಯ ಪಣಿಯಾಡಿಯ ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನದ ಧ್ವಜಸ್ತ೦ಭದ ಸ್ಥಾಪನಾ ಕಾರ್ಯಕ್ರಮವು ನಡೆಯಲಿದೆ.....

ಎಎಪಿ ರಾಜ್ಯಾಧ್ಯಕ್ಷರಾಗಿ ಪೃಥ್ವಿ ರೆಡ್ಡಿ ಪುನರಾಯ್ಕೆ

ಬೆಂಗಳೂರು:ಜೂ, 05. ಆಮ್‌ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಪೃಥ್ವಿ ರೆಡ್ಡಿ ಹಾಗೂ ನಗರಾಧ್ಯಕ್ಷರಾಗಿ ಮೋಹನ್‌ ದಾಸರಿ ಪುನರಾಯ್ಕೆಗೊಂಡಿದ್ದಾರೆ.

ಪಕ್ಷದ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ನಿರ್ದೇಶನದಂತೆ ಪಕ್ಷದ ಕರ್ನಾಟಕ ಚುನಾವಣಾ ಉಸ್ತುವಾರಿ ದಿಲೀಪ್‌ ಪಾಂಡೆಯವರು ರಾಜ್ಯ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು. ರಾಜ್ಯ ಉಪಾಧ್ಯಕ್ಷರಾಗಿ ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಹಾಗೂ ವಿಜಯ್‌ ಶರ್ಮಾ ಅವರನ್ನು ನೇಮಕ ಮಾಡಲಾಗಿದೆ. ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಚಿತ್‌ ಸಹಾನಿ, ರಾಜ್ಯ ಖಜಾಂಚಿಯಾಗಿ ಹರಿಹರನ್‌, ರಾಜ್ಯ ಮಾಧ್ಯಮ ಉಸ್ತುವಾರಿಯಾಗಿ ಜಗದೀಶ್ ವಿ. ಸದಂಗಳಾಗಿ, ರಾಜ್ಯ ವಕ್ತಾರರಾಗಿ ಕೆ. ಮಥಾಯ್ ನೇಮಕಗೊಂಡಿದ್ದಾರೆ.

ಎಚ್.ಡಿ. ಬಸವರಾಜು, ಡಾ. ವೆಂಕಟೇಶ್‌, ಬಿ.ಟಿ. ನಾಗಣ್ಣ, ಲಕ್ಷ್ಮೀಕಾಂತ್‌ ರಾವ್‌, ಶಾಂತಲಾ ದಾಮ್ಲೆ ರಾಜ್ಯ ಕಾರ್ಯದರ್ಶಿಗಳಾಗಿ, ದರ್ಶನ್‌ ಜೈನ್‌ ಹಾಗೂ ವಿವೇಕಾನಂದ ಸಾಲಿನ್ಸ್‌ ರಾಜ್ಯ ಜಂಟಿ ಕಾರ್ಯದರ್ಶಿಗಳಾಗಿ ನೇಮಕಗೊಂಡಿದ್ದಾರೆ.

No Comments

Leave A Comment