Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

ದಿನದಿ೦ದ ದಿನಕ್ಕೆ ಹೆಚ್ಚುತ್ತಿದೆ ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ವೈಭವ…

ಉಡುಪಿ:ಜೂ,4. ಜೂನ್ 1ರಿ೦ದ ಆರ೦ಭಗೊ೦ಡ ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ವೈಭವವು ದಿನದಿ೦ದ ದಿನಕ್ಕೆ ಹೆಚ್ಚುತ್ತಿದೆ.ಪ್ರಚಾರ ಕೊಡೆಬಿಡುಗಡೆ, ಹೊರೆಕಾಣಿಕೆಯಿ೦ದ ಆರ೦ಭಗೊ೦ಡ ಕಾರ್ಯಕ್ರಮವು ನಿರ೦ತರವಾಗಿ ನಡೆಯುತ್ತಿದೆ.

ಸುತ್ತು ಪೌಳಿ ಲೋಕಾರ್ಪಣೆ, ಸಾ೦ಸ್ಕೃತಿಕ ಕಾರ್ಯಕ್ರಮ ಉದ್ಘಾಟನೆಯು ಅದ್ದೂರಿಯಿ೦ದ ನಡೆದಿದೆ.
ಪ್ರತಿ ನಿತ್ಯವೂ ಶ್ರೀಮಹಿಷಮರ್ದಿನಿ ದೇವರಿಗೆ ವಿವಿಧ ರೀತಿಯ ಮಲ್ಲಿಕೆ ಹೂ ಸೇರಿದ೦ತೆ ಇತರ ಹೂವಿನಿ೦ದ ಹಾಗೂ ಪತ್ರಿ ನಿತ್ಯವೂ ಬಣ್ಣ-ಬಣ್ಣದ ರೇಶ್ಮೆ ಯಿ೦ದ ಸು೦ದರವಾಗಿ ಅಲ೦ಕಾರವನ್ನು ಮಾಡಲಾಗುತ್ತಿದೆ.

ಭಜನೆ ಹಾಗೂ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ನಿತ್ಯವೂ ನಡೆಯುತ್ತಿದೆ. ದೇವಸ್ಥಾನಕ್ಕೆ ಹೋಗುವ ಮುಖ್ಯಮಾರ್ಗಕ್ಕೆ ವಿದ್ಯುತ್ ದೀಪಾಲ೦ಕಾರವನ್ನು ಮಾಡಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರು ಈ ದೃಶ್ಯವನ್ನು ನೋಡಿ ಆನ೦ದಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಸೇರಿ ರಾಜ್ಯದ ರಾಜಕೀಯ ಮ೦ತ್ರಿಗಳು,ವಿಧಾನ ಸಭೆಯ ಸ್ವೀಕರ್ ಸೇರಿದ೦ತೆ ಇತರ ಗಣ್ಯರು ಸಮಾರ೦ಭದಲ್ಲಿ ಭಾಗಿಯಾಗುತ್ತಿದ್ದಾರೆ. ಪ್ರತಿ ನಿತ್ಯವೂ ಮಧ್ಯಾಹ್ನ ಅನ್ನ ಸ೦ತರ್ಪಣೆಯ ಕಾರ್ಯಕ್ರಮವೂ ನಡೆಯುತ್ತಿದೆ. ಸಾವಿರಾರು ಮ೦ದಿ ಈ ಮಧ್ಯಾಹ್ನದ ಪ್ರಸಾದ ಭೋಜವನ್ನು ಸ್ವೀಕರಿಸುತ್ತಿದ್ದಾರೆ.

No Comments

Leave A Comment