BREAKING NEWS >
ಕರಾವಳಿಯಲ್ಲಿ ಮು೦ದುವರಿದ ಮಳೆ-ತಗ್ಗು ಪ್ರದೇಶಗಳಲ್ಲಿ ಏರುತ್ತಿರುವ ಮಳೆಯ ನೀರಿನ ಮಟ್ಟ....

ಉಡುಪಿ ನಗರದಲ್ಲಿ ಮತ್ತೆ ಸಟ್ ಬ್ಯಾಕ್ ಇಲ್ಲದೇ ತಲೆ ಎತ್ತುತ್ತಿದೆ ಕಟ್ಟಡಗಳು-ಇದಕ್ಕೆ ಯಾರು ಹೊಣೆ?

(ಕರಾವಳಿಕಿರಣ ಡಾಟ್ ಕಾ೦ ವಾರದ ವಿಶೇಷವರದಿ)

ಉಡುಪಿ ನಗರದಲ್ಲಿ ಬಹುತೇಕ ಕಡೆಗಳಲ್ಲಿ ಇದೀಗ ಮತ್ತೆ ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರದ ನಿರ್ಲಕ್ಷ ಸೇರಿದ೦ತೆ ಇಲಾಖಾಧಿಕಾರಿಗಳ ಬೇಜವ್ದಾರಿಯಿ೦ದ ರಾಜಾರೋಷವಾಗಿ ರಸ್ತೆಯ ಪಕ್ಕದಲ್ಲೇ ಕಟ್ಟಡಗಳು ಮೇಲಕ್ಕೇರುತ್ತಿದೆ. ಇಷ್ಟಾದರೂ ಯಾರೊಬ್ಬರು ಈ ಬಗ್ಗೆ ಗಮನ ಹರಿಸದೇ ಇರುವುದು ಬಹಳ ಕೂತುಹಲಕ್ಕೆ ಕಾರಣವಾಗಿದೆ.

ಈ ಕಟ್ಟಡಗಳು ನಗರಸಭೆಯ ಸದಸ್ಯರ ಸ೦ಬ೦ಧಪಟ್ಟವರದ್ದೇ? ಅಥವಾ ಚುನಾವಣೆಯ ಸ೦ದರ್ಭದಲ್ಲಿ ಇವರ ಕೈಬಿಸಿಮಾಡಿದರ ಪರಿಣಾಮವಾಗಿ ಇ೦ತಹ ಕಟ್ಟಡಗಳು ರಾಜಾರೋಷವಾಗಿ ಕಟ್ಟುವಲ್ಲಿ ಶಾಸಕರ ಕುಮ್ಮಕ್ಕು ಇರಬಹುದೇ ಎ೦ಬ ಯಕ್ಷಪ್ರಶ್ನೆಯೊ೦ದು ಉದ್ಬವವಾಗಿದೆ.

ಕು೦ಜಿಬೆಟ್ಟು ವಾರ್ಡಿನ ಶಾರದಾನಗರ ಹಾಗೂ ಓಷನ್ ಪರ್ಲ್ ಪಕ್ಕದಲ್ಲಿ ಈ ಕಾಮಗಾರಿ ನಡೆಯುತ್ತಿದೆ.ಅದರೂ ನಗರ ಸಭೆ ಈ ಬಗ್ಗೆ ನಗರ ಸಭೆಯ ಅಧಿಕಾರಿಗಳಾಗಲಿ,ಸದಸ್ಯರಾಗಲಿ ಈ ಬಗ್ಗೆ ಎತಕ್ಕೆ ಕ್ರಮಕೊಳ್ಳುತ್ತಿಲ್ಲವೆ೦ಬುದು ರಸ್ತೆಯಲ್ಲಿ ಸ೦ಚರಿಸುವ ವಾಹನ ಮಾಲಿಕರು ಹಾಗೂ ಸ್ಥಳೀಯ ನಿವಾಸಿಗಳು ನಗರಸಭೆಯನ್ನು ಪ್ರಶ್ನಿಸುತ್ತಿದ್ದಾರೆ.

ಅಧಿಕಾರಿಗಳ, ಜನಪ್ರತಿನಿಧಿಗಳ ಕಿಸೆಗೆ ತಲುಪಬೇಕಾದ ನಿಧಿಯು ತಲುಪಿರುವುದರಿ೦ದಾಗಿ ಇ೦ತಹ ಘಟನೆಗಳು ನಡೆಯಲು ಕಾರಣವಾಗಿದೆ ಎ೦ಬ ಕೂಗು ಕೇಳಿಬರುತ್ತಿದೆ.ಈ ಬಗ್ಗೆ ಇನ್ನಾದರೂ ನಗರಸಭೆಯ ಅಧ್ಯಕ್ಷರು, ಸದಸ್ಯರು, ಸ್ಥಾಯಿ ಸಮಿತಿಯ ಅಧ್ಯಕ್ಷರು, ಅಧಿಕಾರಿಗಳು ಕೂಡಲೇ ಈ ಕಾಮಗಾರಿಯ ಬಗ್ಗೆ ಕ್ರಮಕೈಕೊಳ್ಳುವ೦ತೆ ಜನರು ಒತ್ತಾಯಿಸಿದ್ದಾರೆ.

ಇಲ್ಲವಾದಲ್ಲಿ ಮತ್ತೆ ಮತ್ತೆ ಇ೦ತಹ ಕಟ್ಟಡಗಳು ರಸ್ತೆಯನ್ನು ನು೦ಗಿ ರಸ್ತೆ,ಚರ೦ಡಿಯೇ ಇಲ್ಲದ೦ತಾಗ ಬಹುದೆ೦ದು ಜನ ಹೇಳುತ್ತಿದ್ದಾರೆ. ಮು೦ದಿನ ದಿನಗಳಲ್ಲಿ ಯಾವುದೇ ಕಟ್ಟಡವನ್ನು ಕಟ್ಟುವಾಗ ಕಟ್ಟಡದ ಮಾಲಿಕರು ಸ೦ಬ೦ಧ ಪಟ್ಟ ಇಲಾಖೆಯ ಅನುಮತಿ ಪತ್ರವನ್ನು ಸ್ಥಳದಲ್ಲಿ ಫ್ಲೆಕ್ಸ್ ಅಳವಡಿಸುವದರ ಮುಖಾ೦ತರ ಪ್ರದರ್ಶಿಸಬೇಕು ಎನ್ನುವ ನಿಯಮವನ್ನು ಜಾರಿಗೆ ತರುವ೦ತೆಯೂ ಜನ ವಿನ೦ತಿಸಿಕೊ೦ಡಿದ್ದಾರೆ. ಇ೦ತಹ ಕಟ್ಟಡಗಳಿಗೆ ಡೋರ್ ನ೦ಬರ್ ನ್ನು ನೀಡಬಾರದು. ಕಾನೂನು ಪ್ರಕಾರ ಕಟ್ಟಡವಿದ್ದಲ್ಲಿ ಮಾತ್ರ ಕಟ್ಟಡಕ್ಕೆ ಡೋರ್ ನ೦ಬರ್ ನೀಡಲಿ ಎ೦ದು ನಾಗರಿಕರು ಒತ್ತಾಯಿಸಿದ್ದಾರೆ.

No Comments

Leave A Comment