BREAKING NEWS >
ಕರಾವಳಿಯಲ್ಲಿ ಮು೦ದುವರಿದ ಮಳೆ-ತಗ್ಗು ಪ್ರದೇಶಗಳಲ್ಲಿ ಏರುತ್ತಿರುವ ಮಳೆಯ ನೀರಿನ ಮಟ್ಟ....

ಹೋಟೆಲ್‌ನಲ್ಲಿ ತಂದೂರಿ ಚಿಕನ್ ತಿಂದು ವಿದ್ಯಾರ್ಥಿ ಸಾವು

ತಿರುವಣ್ಣಾಮಲೈ:ಜೂ 03.ಹೋಟೆಲ್‌ನಲ್ಲಿ ತಂದೂರಿ ಚಿಕನ್ ಸೇವಿಸಿದ 17 ವರ್ಷದ ದ್ವಿತೀಯ ಪಿಯು ವಿದ್ಯಾರ್ಥಿಯೊಬ್ಬ ದುರಂತ ಅಂತ್ಯ ಕಂಡ ಘಟನೆ ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಅರಣಿ ಪಟ್ಟಣದಲ್ಲಿ ನಡೆದಿದೆ.

ಅರಣಿ ಪಟ್ಟಣದ ಆಪಲ್ ಶಾಲೆಯ ಮಾಲೀಕ ಗಣೇಶ್ (ಆಪಲ್ ಗಣೇಶ್) ಅವರ ಪುತ್ರ , ತಿರುಮುರುಗನ್(17) ಮೃತ ವಿದ್ಯಾರ್ಥಿಯಾಗಿದ್ದಾನೆ.

ತಿರುಮುರುಗನ್ ​ ದ್ವಿತೀಯ ಪಿಯು ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಎದುರುನೋಡುತ್ತಿದ್ದ. ಮೇ 24ರಂದು ಆರಣಿ ಟೌನ್ ಗಾಂಧಿ ರಸ್ತೆಯಲ್ಲಿರುವ 5 ಸ್ಟಾರ್ ಎಲೈಟ್ ಹೋಟೆಲ್ ನಲ್ಲಿ ಸ್ನೇಹಿತರೊಂದಿಗೆ ಮಾಂಸಾಹಾರಿ ಚಿಕನ್ ತಂದೂರಿ ಹಾಗೂ ಫ್ರೈಡ್ ರೈಸ್ ಸೇವಿಸಿದ್ದಾರೆ.ಅಂದು ರಾತ್ರಿ ಹೊಟ್ಟೆ ನೋವು ಕಾಣಿಸಿಕೊಂಡು ವಾಂತಿಯಾಗಿದೆ. ಮರುದಿನ ಬೆಳಗ್ಗೆ ಕುಟುಂಬಸ್ಥರು ತಿರುಮುರುಗನ್​ನನ್ನು ಸಮೀಪದ ಖಾಸಗಿ ಕ್ಲಿನಿಕ್​ಗೆ ಕರೆದೊಯ್ದರಾದರೂ ಪ್ರಯೋಜನವಾಗಲಿಲ್ಲ. ತಿರುಮುರುಗನ್​ ಕೊನೆಯುಸಿರೆಳೆದ್ದಾನೆ

ಈ ಬಗ್ಗೆ ಗಣೇಶ್ ಅವರು ಅರಣಿ ಟೌನ್ ಪೊಲೀಸರಿಗೆ ದೂರು ನೀಡಿದ್ದು, ಆಹಾರವು ವಿಷಪೂರಿತ ಆಗಿದ್ದರಿಂದಲೇ ಮಗ ಸತ್ತಿದ್ದಾನೆ ಎಂದು ಮೃತನ ತಂದೆ ಗಣೇಶ್ ಅರಣಿ ಟೌನ್ ಪೊಲೀಸರಿಗೆ ದೂರು ನೀಡಿದ್ದಾರೆ.

ಚಿಕನ್ ಶವರ್ಮ ಸೇವಿಸಿದ್ದ 15 ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿನಿ ಮೃತಪಟ್ಟು, 14 ಮಂದಿ ಅಸ್ವಸ್ಥರಾದ ಘಟನೆ ಕಳೆದ ತಿಂಗಳು ಕಾಸರಗೋಡಿನಲ್ಲಿ ಸಂಭವಿಸಿತ್ತು

No Comments

Leave A Comment