ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇಗುಲ ಜೂ. 4-6: ವಿವಿಧ ಸಮಾವೇಶ, ಸಮಾಲೋಚನ ಸಭೆ
ಉಡುಪಿ: ಜೂ, 3. ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಜೂನ್ 10ರತನಕ ನಡೆಯಲಿರುವ ಬ್ರಹ್ಮಕಲಶೋತ್ಸವ ಪ್ರಯುಕ್ತ ವಿವಿಧ ಸಮಾವೇಶ ಮತ್ತು ಸಮಾಲೋಚನ ಸಭೆಗಳ ಧರ್ಮ ಸಭೆಯ ವೇದಿಕೆಯಲ್ಲಿ ನಡೆಯಲಿದೆ.
ಜೂ 4ರ ಬೆಳಗ್ಗೆ 10,30ಕ್ಕೆ ದೇವಸ್ಥಾನ ಮತ್ತು ದೈವಸ್ಥಾನಗಳ ಪರಿಚಾರಕದ ಸಮಸ್ಯೆಗಳು ಮತ್ತು ಪರಿಹಾರ ಮಾರ್ಗಗಳು (ಉಡುಪಿ-ದ.ಕ ಜಿಲ್ಲೆಗಳ ದೇವಸ್ಥಾನ ಮತ್ತು ದೈವಸ್ಥಾನದ ಪರಿಚಾರಕರು),
ಜೂ. 5ರ ಬೆಳಗ್ಗೆ 10.30 ಹಿ೦ದೂ ಸಾರ್ವಜನಿಕ ದೇವಸ್ಥಾನಗಳ ಸ್ವಾಯತ್ತತೆಯ ಸ್ವರೂಪ’ (ಉಡುಪಿ ಮತ್ತು ದ.ಕ. ಜಿಲ್ಲೆಗಳ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಆಸಕ್ತ ಸದಸ್ಯರು)6ರ ಬೆಳಿಗ್ಗೆ 10:30ಕ್ಕೆ ‘ಆನುವಂಶಿಕ ಮತ್ತು ಇತರ ಅರ್ಚಕರ ಸಮಾವೇಶದಲ್ಲಿ ಆರ್ಚಕರು ಭಾಗವಹಿಸಲಿದ್ದಾರೆ.
ಈಗಾಗಲೇ ಉಭಯ ಜಿಲ್ಲೆಗಳ 1,780 ದೇವಸ್ಥಾನ ಮತ್ತು ದೈವಸ್ಥಾನಗಳಿಗೆ ಮಾಹಿತಿ ಪತ್ರ ಕಳುಹಿಸಲಾಗಿದೆ. ಈ ಮೂರು ಸಮಾವೇಶದಲ್ಲಿ ದೇವಸ್ಥಾನ ಮತ್ತು ದೈವಸ್ಥಾನಗಳ ಕೆಲವಷ್ಟು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಅನುಕೂಲವಾಗಲಿದೆ. ಎಂದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ನಾಗೇಶ್ ಹೆಗ್ಡೆ ತಿಳಿಸಿದ್ದಾರೆ.
ದೇವಸ್ಥಾನಗಳ ಸ್ವಾಯತ್ತೆಯ ಸ್ವರೂಪ: ಹಲವಾರು ವರ್ಷಗಳ ಹೋರಾಟದ ಫಲವಾಗಿ ಮುಖ್ಯಮಂತ್ರಿಗಳು ಹಿಂದೂ ಸಾರ್ವಜನಿಕ ದೇವಸ್ಥಾನಗಳ ಸ್ನಾಯತ್ತೆಗೆ ತಾತ್ವಿಕ ಆಶಯವನ್ನು ಕೊಂಕಣ ರ ಪ್ರಕಟಿಸಿದ್ದು. ಹಿಂದೂ ದೇವಸ್ಥಾನಗಳು ಇನ್ನೂ ಸಮಾಜಮುಖಿಯಾಗಿ ಧಾರ್ಮಿಕ ಶ್ರದ್ಧಾಚರಣೆ, ಶಕ್ತಿಯ ಕೇಂದ್ರಗಳಾಗಿ ಮತ್ತು ಸ್ಥಳೀಯ ಕಥೆ, ಭಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಪೋಷಕ ಸ್ಥಾನವಾಗಿ ಬೆಳೆದು ಪಾರದರ್ಶಕವಾಗಿ ಮತ್ತು ಸಮರ್ಥವಾಗಿ ಆಡಳಿತವನ್ನು ನಡೆಸಿಕೊಂಡು ಹೋಗುವಂತೆ ರೂಪರೇಖೆಗಳನ್ನು ತಯಾರಿಸುವುದು. ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸ್ಥಾಪಿತ ಗೋಷ್ಠಿಗಳು – ಅತೀ ಮುಖ್ಯವಾಗಿವೆ. ಸರ್ವರ ಉಪಸ್ಥಿತಿ ಮತ್ತು ಅಭಿಪ್ರಾಯಗಳು ಈ ನಿಟ್ಟಿನಲ್ಲಿ ಅತ್ಯಂತ ಮೌಲ್ಯಯುತವಾಗಿರುತ್ತದೆ ಎಂದು ನಾಗೇಶ್ ಹೆಗ್ಡೆ ತಿಳಿಸಿದ್ದಾರೆ.