
ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇಗುಲದ ಬ್ರಹ್ಮಕಲಶೋತ್ಸವ- ವೈಭವದ ಭವ್ಯ ಹೊರೆಕಾಣಿಕೆಗೆ ಕಾಣಿಯೂರು ಶ್ರೀಗಳ ಅಮೃತ ಹಸ್ತದಿ೦ದ ಚಾಲನೆ-ದಾರಿಯುದ್ಧಕ್ಕೂ ಜನಸಾಗರ…(71pic)
ಉಡುಪಿ:ಮೇ 31. ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇಗುಲದಲ್ಲಿ ಜೂ.1ರಿಂದ 10ರ ತನಕ ನಡೆಯ ಲಿರುವ ಬ್ರಹ್ಮಕಲಶೋತ್ಸವ ಪ್ರಯುಕ್ತ ಜೂ.1ರ ಸಂಜೆ 4ಕ್ಕೆ ಹೊರಕಾಣಿಕೆಯ ಭವ್ಯಮೆರವಣಿಗೆಯನ್ನು ಕಾಣಿಯೂರು ಮಠದ ಶ್ರೀಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಬೆಳ್ಳಿದ್ವಾರ ಹಾಗೂ ಶಿಖರವನ್ನಿಟ್ಟ ಟ್ಯಾಬ್ಲೋಕ್ಕೆ ಆರತಿಯನ್ನು ಬೆಳಕಿಸಿ ಮೆರವಣಿಗೆಯನ್ನು ಉದ್ಘಾಟಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಜಿ. ಶಂಕರ್ ರವರು ಹನುಮ ಮುದ್ರಿತ ಪಾತಕೆಯನ್ನು ಮೇಲಕ್ಕೆತ್ತುವುದರ ಮುಖಾ೦ತರ ಮೆರವಣಿಯಲ್ಲಿ ಭಾಗವಹಿಸಿದ್ದ ವಾಹನಕ್ಕೆ ಚಾಲನೆ ನೀಡಿಸಿದರು.
ವಿಶೇಷ ಆಕರ್ಷಣೆ ಮೆರವಣಿಗೆಯು ಜೋಡುಕಟ್ಟೆಯಿಂದ ಹಳೇ ಡಯಾನ ಸರ್ಕಲ್, ಕವಿ ಮುದ್ದಣ ಮಾರ್ಗ, ಸರ್ವಿಸ್ ಬಸ್ ನಿಲ್ದಾಣ ಮಾರ್ಗವಾಗಿ ಬಿರುದಾವಳಿ, ಚಂಡೆ, ಡೋಲು, ವಾದ್ಯ, ಪಂಚವಾದ್ಯ, ಘಟದಜ, ಸಾಂಸ್ಕೃತಿಕ ಜಾನಪದ ತಂಡಗಳು, ಹುಲಿವೇಷ, ವಿಶೇಷ ಆಕರ್ಷಣೆಯೊಂದಿಗೆ ದೇಗುಲಕ್ಕೆ ತಲುಪಿತು.