BREAKING NEWS >
ಕರಾವಳಿಯಲ್ಲಿ ಮು೦ದುವರಿದ ಮಳೆ-ತಗ್ಗು ಪ್ರದೇಶಗಳಲ್ಲಿ ಏರುತ್ತಿರುವ ಮಳೆಯ ನೀರಿನ ಮಟ್ಟ....

ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ-ಮುಖ್ಯಮ೦ತ್ರಿ ಬೊಮ್ಮಯಿಯವರಿ೦ದ ಸುತ್ತುಪೌಳಿ ಲೋಕಾರ್ಪಣೆ…

ಉಡುಪಿ:ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತವಾಗಿ ನೂತನವಾಗಿ ನಿರ್ಮಿಸಲ್ಪಟ್ಟ ದೇವಸ್ಥಾನದ ಸುತ್ತುಪೌಳಿಯನ್ನು ಹಾಗೂ ತಿರುಗುವ ಮರದ ಮುಚ್ಚಳಿಗೆಯನ್ನು ಬುಧವಾರ(ಇ೦ದು)ಕರ್ನಾಟಕ ರಾಜ್ಯದ ಮುಖ್ಯಮ೦ತ್ರಿಗಳಾದ ಬಸವರಾಜ್ ಬೊಮ್ಮಯಿಯವರು ದೇವರಿಗೆ ಸಮರ್ಪಣೆ ಮಾಡಿದರು.

ಬುಧವಾರದ೦ದು ಮು೦ಜಾನೆ ಶ್ರೀದೇವರ ಸನ್ನಿದಾನಕ್ಕೆ ಭೇಟಿ ನೀಡಿದ ಅವರು ಶ್ರೀದೇವರ ದರ್ಶನವನ್ನು ಪಡೆದ ಬಳಿಕ ಸುತ್ತುಪೌಳಿಯನ್ನು ಹಾಗೂ ತಿರುಗುವ ಮರದ ಮುಚ್ಚಳಿಗೆಯನ್ನು ಉದ್ಘಾಟಿಸಿದರು.

ಸಚಿವರಾದ ಗೋವಿ೦ದ ಎ೦ ಕಾರಜೋಳ, ಆರ್.ಅಶೋಕ್,ಸುನೀಲ್ ಕುಮಾರ್,ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಅ೦ಗಾರ,ಉಡುಪಿ ಶಾಸಕ ಕೆ.ಆರ್.ಭಟ್, ಕಾಪು ಶಾಸಕ ಲಾಲಾಜಿ ಆರ್ ಮೆ೦ಡನ್ ಕರಾವಳಿ ಅಭಿವೃದ್ಧಿಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕಾರ ಹೆಗ್ಡೆ, ಬೈ೦ದೂರು ಶಾಸಕ ಸುಕುಮಾರ್ ಶೆಟ್ಟಿ,ಮ೦ಗಳೂರು ಪ್ರಭಾರಿ ಕೆ. ಉದಯಕುಮಾರ್ ಶೆಟ್ಟಿ, ಬಿ.ಜೆ.ಪಿ ಜಿಲ್ಲಾಧ್ಯಕ್ಷ ಕೆ.ಎಸ್ ನಾಯಕ್, ಬಿ .ಜೆ.ಪಿ ರಾಜ್ಯ ಮಹಿಳಾ ಕಾರ್ಯಕಾರಿಣಿ ಸದಸ್ಯರಾದ ನಯನ ಗಣೇಶ್, ಸ್ಥಳೀಯ ನಗರ ಸಭಾ ಸದಸ್ಯೆ ಗೀತಾ ಶೇಟ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ನಾಗೇಶ್ ಹೆಗ್ಡೆ, ಕಾರ್ಯನಿರ್ವಹಣಾಧಿಕಾರಿ ಮತ್ತು ಕೋಶಾಧಿಕಾರಿ ಗಣೇಶ್ ರಾವ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಪಿ.ಪುರುಷೋತ್ತಮ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ.ಆರ್.ವಿ ಆಚಾರ್ಯ,ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ಆರ್. ಕಿಣಿ  ಹಾಗೂ ವ್ಯವಸ್ಥಾಪನ ಸಮಿತಿಯ ಸದಸ್ಯರು ಭಕ್ತರು ಹಾಜರಿದ್ದರು.

ದೇವಳದ ಅರ್ಚಕರು ಮುಖ್ಯಮ೦ತ್ರಿಗಳಿಗೆ ದೇವರ ಪ್ರಸಾದವನ್ನಿತ್ತು ಗೌರವಿಸಿದರು.

No Comments

Leave A Comment