BREAKING NEWS >
ಕರಾವಳಿಯಲ್ಲಿ ಮು೦ದುವರಿದ ಮಳೆ-ತಗ್ಗು ಪ್ರದೇಶಗಳಲ್ಲಿ ಏರುತ್ತಿರುವ ಮಳೆಯ ನೀರಿನ ಮಟ್ಟ....

ಎಸ್ ಡಿಪಿಐ ಸಮಾವೇಶದ ವೇಳೆ ಪೊಲೀಸರಿಗೆ ಅವಾಚ್ಯ ನಿಂದನೆ –9ಆರೋಪಿಗಳ ಬಂಧನ

ಮಂಗಳೂರು: ಮೇ 27 ರಂದು ನಡೆದ ಎಸ್ ಡಿಪಿಐ ಸಮಾವೇಶದ ವೇಳೆ ನಗರದ ಕೊಡೆಕ್ಕಲ್ ಚೆಕ್ ಪೋಸ್ಟ್ ಬಳಿ ಪೊಲೀಸ್ ಸಿಬ್ಬಂದಿಗಳಿಗೆ ನಿಂದಿಸಿದ ಆರೋಪದ ಮೇಲೆ 9ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮಂಗಳೂರು ಇನೋಳಿ ನಿವಾಸಿ ನೌಷಾದ್‌ (28), ಹೈದರಾಲಿ (27) ಮತ್ತು ಇವರಿಗೆ ಆಶ್ರಯ ನೀಡಿದ ಪಾಂಡೇಶ್ವರ ನಿವಾಸಿ ಮೊಹಮ್ಮದ ಸಯ್ಯದ್‌ ಅಫ್ರೀದ್‌ (23), ಕೊಣಾಜೆ ನಿವಾಸಿ ಬಶೀರ್‌ (40), ಇನೋಳಿ ನಿವಾಸಿ ಜುಬೇರ್‌ (32) ಮತ್ತು ಪುತ್ತೂರು ನಿವಾಸಿ ಜಲೀಲ್‌ (25 ) ಎಂದು ಗುರುತಿಸಲಾಗಿದೆ.

ಮಂಗಳೂರು ಪೂರ್ವ ಪೊಲೀಸ್ ಠಾಣೆ ಸಹಾಯಕ ಪೊಲೀಸ್ ಉಪ ನಿರೀಕ್ಷಕ ಚಂದ್ರಶೇಖರ.ಬಿ ಅವರು ದೂರು ಸಲ್ಲಿಸಿದ್ದಾರೆ. ಕೆಟಿಎಂ ಬೈಕ್ ಸವಾರರಿಬ್ಬರು, ಸ್ಕೂಟರ್ ಸವಾರರಿಬ್ಬರು, ಕಾರು ಚಾಲಕ ಮತ್ತು ಇತರರ ವಿರುದ್ಧ ದೂರು ದಾಖಲಿಸಲಾಗಿದೆ. ನಿಂದನೆ ಮಾಡಿದವರ ಕೈಯಲ್ಲಿ ಎಸ್ ಡಿಪಿಐ ಪಕ್ಷದ ಧ್ವಜವಿತ್ತು. ಈ ಕೃತ್ಯದ ವಿಡಿಯೋ ವೈರಲ್ ಆಗಿತ್ತು, ಕಣ್ಣೂರು ಗ್ರಾಮದ ಡಾ.ಶ್ಯಾಮ್ ಪ್ರಸಾದ್ ಶೆಟ್ಟಿ ಮೈದಾನದಲ್ಲಿ ಎಸ್ ಡಿಪಿಐ ಪಕ್ಷ ಆಯೋಜಿಸಿದ್ದ ಜನಾಧಿಕಾರ ಕಾರ್ಯಕ್ರಮದ ವೇಳೆ ಬಂದೋಬಸ್ತ್ ನಲ್ಲಿದ್ದ ಸಿಬ್ಬಂದಿಗಳಿಗೆ ಪಡೀಲ್ ಕಡೆಯಿಂದ ಬಂದ ವಾಹನ ಸವಾರರು ಬ್ಯಾರಿ ಭಾಷೆಯಲ್ಲಿ ವಾಚ್ಯವಾಗಿ ನಿಂದಿಸಿದ್ದು ಇದರ ವಿಚಾರವಾಗಿ ಕಂಕನಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೇ ವೇಳೆ ಆರೋಪಿಗಳನ್ನು ಬಂಧಿಸಲು ತೆರಳಿದ್ದ ವೇಳೆ ಕಂಕನಾಡಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದು ಇದರ ಕುರಿತು ಬೆಂಗಳೂರಿನ ಮಡಿವಾಳ ಪೊಲೀಸ್‌ ಠಾಣೆಯಲ್ಲಿ ವಿಟ್ಟಲ ನಿವಾಸಿ ಮೊಹಮ್ಮದ್‌ ಯಾಸಿನ್‌ (25) ಮಂಗಳೂರು ಶಿವಭಾಗ್‌ ನಿವಾಸಿಗಳಾದ ಅಪ್ರೀದ್‌ ಸಾಗ್‌ (19) ಮತ್ತು ಮೊಹಮ್ಮದ್‌ ತುಫೇಲ್‌ (19) ವಿರುದ್ದ ಪ್ರಕರಣ ದಾಖಲಾಗಿದೆ.

No Comments

Leave A Comment