BREAKING NEWS >
ಕರಾವಳಿಯಲ್ಲಿ ಮು೦ದುವರಿದ ಮಳೆ-ತಗ್ಗು ಪ್ರದೇಶಗಳಲ್ಲಿ ಏರುತ್ತಿರುವ ಮಳೆಯ ನೀರಿನ ಮಟ್ಟ....

ಜೂನ್ 1ರ೦ದು ಕಡಿಯಾಳಿ ಶ್ರೀಮಹಿಷಮರ್ದಿನಿ ದೇಗುಲದ ಬ್ರಹ್ಮಕಲಶೋತ್ಸವಕ್ಕೆ ಹೊರಕಾಣಿಕೆ ಸಮರ್ಪಣೆ- ಬೆಳಿಗ್ಗೆ 9ಕ್ಕೆಮುಖ್ಯಮ೦ತ್ರಿಯಿ೦ದ ಸುತ್ತುಪೌಳಿ ಉದ್ಘಾಟನೆ-…

ಉಡುಪಿ,ಮೇ 31: ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇಗುಲದಲ್ಲಿ ಜೂ.1ರಿಂದ 10ರ ತನಕ ನಡೆಯ ಲಿರುವ ಬ್ರಹ್ಮಕಲಶೋತ್ಸವ ಪ್ರಯುಕ್ತ ಜೂ.1ರ ಸಂಜೆ 4ಕ್ಕೆ ಹೊರಕಾಣಿಕೆ ಮೆರವಣಿಗೆ ನಡೆಯಲಿದೆ.

ಕಾಣಿಯೂರುಮಠದ ಶ್ರೀವಿದ್ಯಾ ವಲ್ಲಭತೀರ್ಥ ಶ್ರೀಪಾದರು ಉದ್ಘಾ ಟಿಸುವರು. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ| ಜಿ. ಶಂಕರ್ ಚಾಲನೆ ನೀಡಲಿದ್ದಾರೆ.

ವಿಶೇಷ ಆಕರ್ಷಣೆ ಮೆರವಣಿಗೆಯು ಜೋಡುಕಟ್ಟೆಯಿಂದ ಹಳೇ ಡಯಾನ ಸರ್ಕಲ್, ಕವಿ ಮುದ್ದಣ ಮಾರ್ಗ, ಸರ್ವಿಸ್ ಬಸ್ ನಿಲ್ದಾಣ ಮಾರ್ಗವಾಗಿ ಬಿರುದಾವಳಿ, ಚಂಡೆ, ಡೋಲು, ವಾದ್ಯ, ಪಂಚವಾದ್ಯ, ಘಟದಜ, ಸಾಂಸ್ಕೃತಿಕ ಜಾನಪದ ತಂಡಗಳ ವಿಶೇಷ ಆಕರ್ಷಣೆಯೊಂದಿಗೆ ದೇಗುಲಕ್ಕೆಸಾಗಿ ಬರಲಿದೆ.

ಹೊರಕಾಣಿಕೆಯ ಸಾಮಗ್ರಿಗಳನ್ನು ಜೋಡಿಸಿಡಲು ಕಡಿಯಾಳಿ ಶಾಲೆಯ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ನಾಗರಿಕರು, ಭಕ್ತರು, ಸಂಘ ಸಂಸ್ಥೆಗಳು ಮಹೋತ್ಸವಕ್ಕೆ ಬೇಕಾದ ಧವಸ ಧಾನ್ಯ, ತರಕಾರಿ, ತೆಂಗಿನಕಾಯಿ ಇತ್ಯಾದಿಗಳನ್ನು ತಂದೊಪ್ಪಿಸಲು ಅವಕಾಶವಿದೆ. ಹೊರಕಾಣಿಕೆ ನೀಡಲಿಚ್ಛಿಸುವವರು ಜೂ.1ರ ಅಪರಾಹ್ನ 2ರೊಳಗೆ ತಂದೊಪ್ಪಿಸಬಹುದು.

ಕಲ್ಯಾಣ ಮಂಟಪ (ಚಂದ್ರಶೇಖರ ಪ್ರಭು, ಸಗ್ರಿ-ಮಲೆಜುಮಾದಿ ಸ್ಥಾನ (ಆನಂದ ಶೇರಿಗಾಲ್ ಮತ್ತು ಲತಾ ಶೇರಿಗಾರ್), ಗುಂಡಿಬೈಲು (ಎಷ್ಟು ಪಾಡಿಗಾರ್), ಕಡಿಯಾಳಿ ಮೀನು ಮಾರ್ಕೆಟ್ (ಶಶಿರಾಜ್ ಕುಂದರ್), ಶಂಕರನಾರಾಯಣ ದೇವಸ್ಥಾನ (ಕೃಷ್ಣಾನಂದ ಭಟ್), ಕರಂಬಳ್ಳಿ ವೆಂಕಟರಮಣ ದೇವಸ್ಥಾನ (ಕಿಶೋರ್ ಕರಂಬಳ್ಳಿ), ದೊಡ್ಡಣಗುಡ್ಡ ವಿಷ್ಣುಮೂರ್ತಿ ಫ್ರೆಂಡ್ಸ್ (ದಿನೇಶ್ ), ಉಡುಪಿ ಲಕ್ಷ್ಮೀ ವೆಂಕಟರದುಣ ದೇಗುಲ (ದೇಗುಲದ ಕೌಂಟರ್), ಪಣಿಯಾಡಿ ದೇಗುಲ (ದೇಗುಲದ ಕೌಂಟರ್), ಬೈಲಕರ (ಸುನಿಲ್ ಬೈಲಕರ), ಮನೋರಿಗುಟ್ಟಿ ಉಮಾಮಹೇಶ್ವರಿ ದೇಗುಲ (ದೇಗುಲದ ಕೌಂಟರ್), ಎಂಜಿಎಂ ಕೆಇಬಿ ಕಾಟ್ರಸ್‌ (ಅಶೋಕ್ ಶೆಟ್ಟಿ), ಸಾರ್ವಜನಿಕ ಗಣೇಶೋಶದ ಸಮಿತಿ ಗೋಳಿಕಟ್ಟೆ ಮನೋಳಿಗುಜ್ಜಿ (ಪ್ರವೀಶ್), ಕೊಡವೂರು ಶಂಕರನಾರಾಯಣ ದೇಗುಲ (ದೇಗುಲದ ಕೌಂಟರ್)ನಲ್ಲಿ ಹೊರಕಾಣಿಕೆಯನ್ನು ಮುಂಗಡವಾಗಿ ಸ್ವೀಕರಿಸಲಾಗುವುದು.

ಮಾಹಿತಿಗೆ ಹೊರಕಾಣಿಕೆಯ ಸಮಿತಿ ಅಧ್ಯಕ್ಷ ಭಾಸ್ಕರ್ ಶೇರಿಗಾರ್ ಅವರನ್ನು ಸಂಪರ್ಕಿಸಬಹುದೆಂದು ದೇಗುಲದ ಪ್ರಕಟನೆ ತಿಳಿಸಿದೆ.

No Comments

Leave A Comment