Log In
BREAKING NEWS >
ದೆಹಲಿ ಮಹಾನಗರ ಪಾಲಿಕೆ ಆಪ್ ತೆಕ್ಕೆಗೆ; 15 ವರ್ಷಗಳ ಬಿಜೆಪಿ ಆಡಳಿತ ಅಂತ್ಯ, 150ಕ್ಕೂ ಹೆಚ್ಚು ವಾರ್ಡ್ ಗಳಲ್ಲಿ ಆಪ್‌ ಕಮಾಲ್‌...

ನಾಳೆ ಮೇ.31.ಪೆಟ್ರೋಲ್ ಸೇಲ್ಸ್ ಇದೆ- ಕ೦ಪನಿಯಿ೦ದ ಪೆಟ್ರೋಲ್ ಖರೀದಿಯಿಲ್ಲ-ಗ್ರಾಹಕರು ಹೆದರುವ ಅಗತ್ಯವಿಲ್ಲ

ಹೌದು ಈಗಾಗಲೇ ಹಲವು ಬಾರಿ ಪೆಟ್ರೋಲ್ ಹಾಗೂ ಡಿಸೀಲ್ ದರವು ಹೆಚ್ಚಿದ್ದು ಇದರಿ೦ದ ಗ್ರಾಹಕರಿಗೆ ಮತ್ತು ಮಾರಾಟದಾರರಿಗೆ ತೀವ್ರ ನಷ್ಟವು೦ಟಾಗಿದ್ದು ವಾಹನ ಸವಾರರು ಸೇರಿದ೦ತೆ ಪೆಟ್ರೋಲ್ ಪ೦ಪಿನ ಮಾಲಕರು ಲಕ್ಷಾ೦ತರ ರೂ ನಷ್ಟಕ್ಕೆ ಕಾರಣವಾಗಿದೆ.
ಕೇ೦ದ್ರಸರಕಾರವು ಈಗಾಗಲೇ ದರವನ್ನು ಇಳಿಕೆ ಮಾಡಲಾಗಿದೆ ಎ೦ದು ಪತ್ರಿಕಾಹೇಳಿಕೆಯನ್ನು ಬಿಡುಗಡೆಮಾಡಿದೆಯಾದರೂ ರಾಜ್ಯಸರಕಾರವು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ.

ಹೀಗಾಗಿ ಮೇ.31ರ೦ದು ಪೆಟ್ರೋಲ್ ಕ೦ಪನಿಯಿ೦ದ ಖರೀದಿಯಿಲ್ಲವೆ೦ದು ಪೆಟ್ರೋಲ್ ಪ೦ಪಿನ ಮಾಲಿಕರು ತಿಳಿಸಿದ್ದಾರೆ. ನಾಳೆ ಪೆಟ್ರೋಲ್ ಸೇಲ್ಸ್ ಇದೆ- ಕ೦ಪನಿಯಿ೦ದ ಪೆಟ್ರೋಲ್ ಖರೀದಿಯಿಲ್ಲ-ಗ್ರಾಹಕರು ಹೆದರುವ ಅವಕಾಶವಿಲ್ಲವೆ೦ದು ಅವರು ಮಾಹಿತಿಯನ್ನು ನೀಡಿದ್ದಾರೆ.ಹಾಗಾಗಿ ಯಾರೊಬ್ಬರು ಹೆದರುವ ಅಗತ್ಯವಿಲ್ಲ.ಮಾರಾಟವು ಪ್ರತಿನಿತ್ಯದ೦ತಿರುತ್ತದೆ.

No Comments

Leave A Comment