Log In
BREAKING NEWS >
ದೆಹಲಿ ಮಹಾನಗರ ಪಾಲಿಕೆ ಆಪ್ ತೆಕ್ಕೆಗೆ; 15 ವರ್ಷಗಳ ಬಿಜೆಪಿ ಆಡಳಿತ ಅಂತ್ಯ, 150ಕ್ಕೂ ಹೆಚ್ಚು ವಾರ್ಡ್ ಗಳಲ್ಲಿ ಆಪ್‌ ಕಮಾಲ್‌...

ಮಂಗಳೂರು: ಡಿವೈಡರ್ ಗೆ ಢಿಕ್ಕಿ ಹೊಡೆದ ಸ್ಕೂಟರ್ – ಇಬ್ಬರು ಗಂಭೀರ

ಮಂಗಳೂರು:ಮೇ 30 . ಅತೀವೇಗದಿಂದ ಚಲಾಯಿಸಿಕೊಂಡು ಬಂದ ಸ್ಕೂಟರ್ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಬಿಕರ್ನಕಟ್ಟೆಯಲ್ಲಿ ಸೋಮವಾರ ನಸುಕಿನ ಜಾವ ನಡೆದಿದೆ.

ಗಾಯಾಳುಗಳನ್ನು ಬಿದ್ದ ಗಣೇಶ್ ಹಾಗೂ ಧೀರಜ್ ಎಂದು ಗುರುತಿಸಲಾಗಿದೆ.

ಮೇ 29 ಭಾನುವಾರ ಮುಂಜಾನೆ ಘಟನೆ ನಡೆದಿದ್ದು, ಗಣೇಶ್ ಎಂಬಾತ ಧೀರಜ್ ನನ್ನು ಮನೆಗೆ ಬಿಟ್ಟು ಬರಲು ತೆರಳಿದ್ದು, ಈ ವೇಳೆ ನಿಯಂತ್ರಣ ತಪ್ಪಿದ ಸ್ಕೂಟರ್ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರ್ ನಿಂದ ರಸ್ತೆಗೆ ಬಿದ್ದ ಗಣೇಶ್ ಹಾಗೂ ಧೀರಜ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ನಸುಕಿನ ಹಾವು 2.30ರ ವೇಳೆಗೆ ಸೆಂಟ್ರಲ್ ರೈಲ್ವೇ ಸ್ಟೇಷನ್ ಗೆ ಬಾಡಿಗೆಗೆಂದು ತೆರಳುವ ಆಟೋ ಚಾಲಕ ಪ್ರವೀಣ್ ಕುಮಾರ್ ಇದನ್ನು ಗಮನಿಸಿ ಸಾರ್ವಜನಿಕರ ಸಹಾಯದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಪಘಾತದದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಮಂಗಳೂರುಸಂಚಾರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment