Log In
BREAKING NEWS >
ದೆಹಲಿ ಮಹಾನಗರ ಪಾಲಿಕೆ ಆಪ್ ತೆಕ್ಕೆಗೆ; 15 ವರ್ಷಗಳ ಬಿಜೆಪಿ ಆಡಳಿತ ಅಂತ್ಯ, 150ಕ್ಕೂ ಹೆಚ್ಚು ವಾರ್ಡ್ ಗಳಲ್ಲಿ ಆಪ್‌ ಕಮಾಲ್‌...

ಆಂಧ್ರ ಪ್ರದೇಶದ ಪಲ್ನಾಡ್ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ: 7 ಮಂದಿ ಸಾವು, 11 ಮಂದಿಗೆ ಗಾಯ

ಪಲ್ನಾಡು(ಆಂಧ್ರ ಪ್ರದೇಶ): ಮಿನಿ ವ್ಯಾನ್ ಮತ್ತು ನಿಂತಿದ್ದ ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿ ಏಳು ಮಂದಿ ಮೃತಪಟ್ಟು ಇತರ 11 ಮಂದಿ ಗಾಯಗೊಂಡಿರುವ ಘಟನೆ ನಿನ್ನೆ ಭಾನುವಾರ ತಡರಾತ್ರಿ ಆಂಧ್ರ ಪ್ರದೇಶದ ಪಲ್ನಾಡು ಜಿಲ್ಲೆಯ ರೆಂಟಚಿಂತಲ ಎಂಬಲ್ಲಿ ಸಂಭವಿಸಿದೆ.

ಗಾಯಗೊಂಡವರನ್ನು ಉತ್ತಮ ಚಿಕಿತ್ಸೆಗೆ ಗುಂಟೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗುರ್ಜಾಲ ಡಿಎಸ್ ಪಿ ಜಯರಾಮ್ ತಿಳಿಸಿದ್ದಾರೆ. ಅತಿವೇಗದ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ.

ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ರೆಂಟಚಿಂತಲದಿಂದ ಕನಿಷ್ಠ 35 ಮಂದಿ ಪ್ರಯಾಣಿಕರು ಮಿನಿ ವ್ಯಾನ್ ನಲ್ಲಿ ಶ್ರೀಶೈಲಮ್ ಗೆ ಯಾತ್ರೆ ಹೊರಟಿದ್ದರು. ರೆಂಟಚಿಂತಲ ಹತ್ತಿರ ಬರುವಾಗ ಮಿನಿ ವ್ಯಾನ್ ನ ಚಾಲಕ ವಾಹನವನ್ನು ನಿಂತಿದ್ದ ಸ್ಟೇಷನರಿ ಲಾರಿಗೆ ಹಿಂದಿನಿಂದ ಹೋಗಿ ಡಿಕ್ಕಿ ಹೊಡೆದಿದ್ದಾರೆ.

ನಿನ್ನೆ ಭಾನುವಾರವಷ್ಟೇ ಅಯೋಧ್ಯೆಗೆ ಹೋಗುತ್ತಿದ್ದ ಕರ್ನಾಟಕದ ವ್ಯಾನ್ ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳೆಯರು ಸೇರಿದಂತೆ ಏಳು ಮಂದಿ ಮೃತಪಟ್ಟು, ಇತರ 9 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಬಹ್ರೈಚ್-ಲಖಿಂಪುರ ಹೆದ್ದಾರಿಯಲ್ಲಿ ನಡೆದಿತ್ತು.

ಮೃತಪಟ್ಟವರೆಲ್ಲರೂ ಬೀದರ್ ಜಿಲ್ಲೆಯವರಾಗಿದ್ದು ಮೃತದೇಹಗಳನ್ನು ರವಾನಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಮನವಿ ಮಾಡಿಕೊಂಡಿದ್ದಾರೆ.

No Comments

Leave A Comment