ಭಟ್ಕಳ: ಮಹೀಂದ್ರ ಬೋಲೆರೋ ವಾಹನದಲ್ಲಿ ಕೋಣಗಳ ನ್ನು ಸಾಗಾಟ ಮಾಡುವ ವೇಳೆ ಪೊಲೀಸರು ದಾಳಿ ಮಾಡಿ ಮೂರು ಆರೋಪಿಗಳನ್ನು ಬಂಧಿಸಿ ಓರ್ವ ಪರಾರಿಯಾಗಿರುವ ಘಟನೆ ಭಟ್ಕಳ ಗೊರಟೆ ಹೊಳೆಗದ್ದೆಯಲ್ಲಿ ನಡೆದಿದೆ.
ಬಂಧಿತ ಆರೋಪಿಗಳನ್ನು ಮಾದೇವ ಜಟ್ಟಪ್ಪ ನಾಯ್ಕ, ಮಂಜು ನಾಯ್ಕ ,ಇಬ್ರಾಹಿಂ ಜಬಾಲಿ ಹಾಗೂ ಇಬ್ರಾಹಿಂ ಖಲೀಲ್ ಎಂದು ತಿಳಿದು ಬಂದಿದೆ. ಇವರೆಲ್ಲ ಸುಮಾರು 30,000 ರೂಪಾಯಿ ಮೌಲ್ಯದ 2 ಕಪ್ಪು ಬಣ್ಣದ ಕೋಣವನ್ನು ನೀರು ಹುಲ್ಲು ಕೊಡದೆ ನಾಲ್ಕು ಕಾಲುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ವಧೆ ಮಾಡುವ ಉದ್ದೇಶದಿಂದ ಸಕ್ಷಮ ಪ್ರಾಧಿಕಾರದಿಂದ ವಾಹನದಲ್ಲಿ ಸಾಗಾಟ ಮಾಡಲು ಪರವಾನಿಗೆ ಪಡೆಯದೇ ಗೊರಟೆ ಕಡೆಯಿಂದ ಸಾಗಾಟ ಮಾಡುತ್ತಿದ್ದ ವೇಳೆ ಗೊರಟೆ ಹೊಳೆಗದ್ದೆ ಬಳಿ ಪೊಲೀಸರು ದಾಳಿ ಮಾಡಿ ಮೂವರು ಆರೋಪಿಗಳನ್ನು ಹಾಗೂ 2 ಕೋಣಗಳ ಸಮೇತ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದು ಚಾಲಕ ಮಂಜು ನಾಯ್ಕ ಪರಾರಿಯಾಗಿದ್ದಾನೆ
ಈ ಬಗ್ಗೆ ಗ್ರಾಮೀಣ ಠಾಣೆ ಪಿಎಸೈ ಭರತ್ ಕುಮಾರ ದೂರು ನೀಡಿದ್ದು ಪ್ರಕರಣ ದಾಖಲಿಸಿ ಕೊಂಡ ಪಿ.ಎಸೈ ರತ್ನಾ ಎಸ್ ಕುರಿ,ತನಿಖೆ ಕೈಗೊಂಡಿದ್ದಾರೆ.