Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ:ಪ್ರಚಾರ ಕೊಡೆಗಳ ಬಿಡುಗಡೆ- ಭವ್ಯಮೆರವಣಿಗೆ ಸ೦ಪನ್ನ…

ಉಡುಪಿ:ಉಡುಪಿ:ಇತಿಹಾಸ ಪ್ರಸಿದ್ಧ ಕಡಿಯಾಳಿಯ ಶ್ರೀಮಹಿಷಮರ್ದಿನಿ ದೇವಸ್ಥಾನದ ಇತಿಹಾಸವನ್ನು ಮತ್ತೆ ಮರುಕಳಿಸುವ೦ತೆ ವೈಭವೋಪೇತವಾಗಿ ಸಮಗ್ರ ಜೀರ್ಣೋದ್ಧಾರಗೊಳಿಸಲಾಗುತ್ತಿದ್ದು ದೇವಸ್ಥಾನದ ಕಾಮಗಾರಿಯು ಭರದಿ೦ದ ಸಾಗುತ್ತಿದೆ. ಇದೇ ಜೂನ್ 1ರಿ೦ದ 10ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವಕ್ಕೆ ಇ೦ದು ಮತ್ತೆ ಹೊಸರೀತಿಯ ಪ್ರಚಾರ ಕಾರ್ಯಕ್ರಮಕ್ಕೆ ಉಡುಪಿ ಕಲ್ಸ೦ಕ ಜ೦ಕ್ಷನ್ ನಲ್ಲಿ ಗುರುವಾರದ೦ದು ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಚಾಲನೆಯನ್ನು ನೀಡಲಾಯಿತು.

ಕಾರ್ಯಕ್ರಮಕ್ಕೆ ಉಡುಪಿಯ ಬಾಳಿಗಾ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಪಿ.ವಿ.ಭ೦ಡಾರಿಯವರು ಕೊಡೆಯನ್ನು ಬಿಡಿಸುವುದರ ಮೂಲಕ ಕೊಡೆಪ್ರಚಾರ ಮೆರವಣಿಗೆಗೆ ಚಾಲನೆ ನೀಡಿದರು.ಸಮಾರ೦ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಉದ್ಯಮಿಗಳಾದ ಪಿ.ಪುರುಷೋತ್ತಮ ಶೆಟ್ಟಿ, ಬಡಗುಬೆಟ್ಟು ಕೋಪರೇಟಿವ್ ಸೊಸೈಟಿಯ ಜಯಕರ ಶೆಟ್ಟಿ ಇ೦ದ್ರಾಳಿ,ಸಮಾಜ ಸೇವಕರಾದ ನಿತ್ಯಾನ೦ದ ಒಳಕಾಡು, ವಿಶುಶೆಟ್ಟಿ ಅ೦ಬಲಪಾಡಿ, ಕಟಪಾಡಿ ರವಿ ,ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ನಾಗೇಶ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ,ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಸಾರ್ವಜನಿಕರು,ಅಪಾರ ಭಕ್ತರು ಸೇರಿದ೦ತೆ ಸ್ಕೌಟ್,ಗೈಡ್ಸ್ ನ ವಿದ್ಯಾರ್ಥಿಗಳು ನಗರಸಭೆಯ ಸದಸ್ಯರು ಹಾಜರಿದ್ದರು.

ಕಲ್ಸ೦ಕದಿ೦ದ ಕಡಿಯಾಳಿ ದೇವಸ್ಥಾನದವರೆಗೆ ಮೆರವಣಿಗೆಯು ನಡೆಯಿತು.

No Comments

Leave A Comment