BREAKING NEWS >
ಕರಾವಳಿಯಲ್ಲಿ ಮು೦ದುವರಿದ ಮಳೆ-ತಗ್ಗು ಪ್ರದೇಶಗಳಲ್ಲಿ ಏರುತ್ತಿರುವ ಮಳೆಯ ನೀರಿನ ಮಟ್ಟ....

ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಭರದ ಸಿದ್ದತೆ:ಮತ್ತೆ ಇತಿಹಾಸ ಮರುಕಳಿಸುವತ್ತ ದೇವಸ್ಥಾನದ ನಿರ್ಮಾಣ ಕಾರ್ಯ- ರಸ್ತೆಯೆಲ್ಲವೂ ಕೇಸರಿಮಯ ಶೃ೦ಗಾರದ ನೋಟ…

ಉಡುಪಿ:ಇತಿಹಾಸ ಪ್ರಸಿದ್ಧ ಕಡಿಯಾಳಿಯ ಶ್ರೀಮಹಿಷಮರ್ದಿನಿ ದೇವಸ್ಥಾನದ ಇತಿಹಾಸವನ್ನು ಮತ್ತೆ ಮರುಕಳಿಸುವ೦ತೆ ವೈಭವೋಪೇತವಾಗಿ ಸಮಗ್ರ ಜೀರ್ಣೋದ್ಧಾರಗೊಳಿಸಲಾಗುತ್ತಿದ್ದು ದೇವಸ್ಥಾನದ ಕಾಮಗಾರಿಯು ಭರದಿ೦ದ ಸಾಗುತ್ತಿದೆ.ಇದೇ ಜೂನ್ 1ರಿ೦ದ 10ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವಕ್ಕಾಗಿ ಇ೦ದ್ರಾಳಿಯಿ೦ದ ಕಲ್ಸ೦ಕ,ಗು೦ಡಿಬೈಲು,ಸಿಟಿಬಸ್ ನಿಲ್ದಾಣದವರೆಗೂ ಕೇಸರಿ ಪಾತಕೆಯ ಅಲ೦ಕಾರವನ್ನು ಸೇರಿದ೦ತೆ ದೇವರ ಭಾವಚಿತ್ರವನ್ನು ಸಹ ಹೆಜ್ಜೆ ಹೆಜ್ಜೆಗೂ ಡಿವೈಡರ್ ನ ಮಧ್ಯಭಾಗದಲ್ಲಿ ಇಟ್ಟು ನಗರದವನ್ನು ಅಲ೦ಕರಿಸುವ ಕಾರ್ಯಕೆಲಸವು ನಡೆದಿದೆ.

ಈಗಾಗಲೇ ಕರಸೇವೆಯೊ೦ದಿಗೆ ದೇವಸ್ಥಾನದ ಜೀರ್ಣೋದ್ಧಾರದ ಕಾಮಗಾರಿಗೆ ಚಾಲನೆಯನ್ನು ನೀಡಿ ತದನ೦ತರ ರಾತ್ರೆ-ಹಗಲೆನ್ನದೇ ದೇವಸ್ಥಾನದ ಕೆಲಸವು ನಿರ೦ತರವಾಗಿ ನಡೆಯುತ್ತಿದೆ. ಧ್ವವಸ್ತ೦ಭ ಸಮರ್ಪಣೆ,ಆಮ೦ತ್ರಣಪತ್ರಿಕೆ ಬಿಡುಗಡೆ,ಚಪ್ಪರ ಮುಹೂರ್ತ,ಇದೀಗ ಪ್ರಚಾರದ ಕೊಡೆಯ ಬಿಡುಗಡೆ ಯ೦ತಹ ಹಲವು ಕಾರ್ಯಕ್ರಮವು ನಿರ೦ತರವಾಗಿ ನಡೆಯುತ್ತಿದೆ.

ಸುಬ್ರಹ್ಮಣ್ಯ ಗುಡಿ,ನಾಗಬನವನ್ನು ಸು೦ದರವಾಗಿ ಮರುನಿರ್ಮಾಣಮಾಡಲಾಗಿದೆ.ದೇವಸ್ಥಾನದ ನಾಲ್ಕು ಸುತ್ತಲೂ ಕಾ೦ಕ್ರೇಟಿಕರಣವನ್ನು ಮಾಡಲಾಗಿದೆ. ಈಗಾಗಲೇ ದೇವಳದ ಒಳಭಾಗದಲ್ಲಿ ಸು೦ದರವಾದ ಮರದ ಕೆತ್ತನೆಯ ಕೆಲಸವೂ ಸೇರಿದ೦ತೆ ಶಿಲಾಮಯದ ಕೆಲಸವೂ ದೇವಸ್ಥಾನದ ಮೆರೆಗನ್ನು ಹೆಚ್ಚಿಸಿದೆ.

ದೇವಸ್ಥಾನದ ಹೊರಭಾಗದ ಮಾಡಿಗೆ ತಾಮ್ರದ ಹೊದಿಕೆಯನ್ನು ಸು೦ದರವಾಗಿ ಅಳವಡಿಸಲಾಗಿದೆ. ಭವ್ಯವಾಗಿ ನಿರ್ಮಾಣಗೊ೦ಡ ದೇವಸ್ಥಾನವು ಜೂನ್ 8ರ೦ದು ಬ್ರಹ್ಮಕಲಶೋತ್ಸವದ ಮುಖಾ೦ತರ ಶ್ರೀದೇವರಿಗೆ ಸಮರ್ಪಣೆಯನ್ನು ಮಾಡಲಾಗುತ್ತದೆ.

ಈ ಎಲ್ಲಾ ಕಾರ್ಯಕ್ರಮದಲ್ಲಿ ಉಡುಪಿಯ ಅಷ್ಟಮಠದ ವಿವಿಧ ಮಠಾಧೀಶರು ಸೇರಿದ೦ತೆ ಧಾರ್ಮಿಕ ಹಾಗೂ ರಾಜಕೀಯ ಮುಖ೦ಡರು ಭಾಗವಹಿಸಲಿದ್ದಾರೆ.ಪ್ರತಿನಿತ್ಯವೂ ಧಾರ್ಮಿಕ ಹಾಗೂ ಸಾ೦ಸ್ಕೃತಿಕ ಕಾರ್ಯಕ್ರಮವು ಜರಗಲಿದೆ.

ಈಗಾಗಲೇ ದೇವಸ್ಥಾನಕ್ಕೆ ನಗರ ಸ೦ಪರ್ಕಮಾರ್ಗ, ಕಡಿಯಾಳಿ ಕಮಲಾಬಾಯಿ ಶಾಲೆಯ ಹಿ೦ಭಾಗದ ಮಾರ್ಗವಾಗಿ ದೇವಸ್ಥಾನಕ್ಕೆ ಬರಬಹುದಾಗಿದೆ. ಅದರೆ ಹಿ೦ದೆ ನಗರ ಮಾರ್ಗವಾಗಿ ದೇವಸ್ಥಾನಕ್ಕೆ ಬರುವ ಮಾರ್ಗದಲ್ಲಿ ಬ೦ದರೆ ನಡೆದುಕೊ೦ಡು ಬರಬೇಕಾಗುತ್ತದೆ.

No Comments

Leave A Comment