ವಿಟ್ಲ:ಮೇ 26. ಕೇಪು ಗ್ರಾಮದ ಕರವೀರ ಬಸ್ ನಿಲ್ದಾಣದ ಬಳಿ ಅಡ್ಯನಡ್ಕ ನಿವಾಸಿ ಗಿರೀಶ್ ಮತ್ತು ಮೈರ ನಿವಾಸಿ ರಕ್ಷಿತ್ ಕುಮಾರ್ ಅವರಿಗೆ ಮೇ 14ರಂದು ಮಾರಣಾಂತಿಕ ಹಲ್ಲೆ ಮಾಡಿದ ಪ್ರಕರಣದ ಇಬ್ಬರು ಆರೋಪಿಗಳನ್ನು ಮೇ 24ರಂದು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಅರೋಪಿಗಳನ್ನು ಉಕ್ಕುಡ ದರ್ಬೆ ನಿವಾಸಿ ಅಬ್ದುಲ್ ಸಲಾಂ (23) ಮತ್ತು ಉಕ್ಕುಡ ದರ್ಬೆ ನಿವಾಸಿ ಅಯೂಬ್ (24) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇದರಿಂದ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತ ಆರೋಪಿಗಳ ಸಂಖ್ಯೆ 4ಕ್ಕೇರಿದೆ. ಆರೋಪಿಗಳಾದ ಕೆ. ಮಹಮ್ಮದ್ ಶರೀಫ್ ಮತ್ತು ಸಾದಿಕ್‌ನನ್ನು ಈ ಹಿಂದೆಯೇ ಪೊಲೀಸರು ಬಂಧಿಸಿದ್ದರು.