Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ನಟರಾದ ವಿಜಯ್ ದೇವರಕೊಂಡ ಹಾಗೂ ಸಮಂತಾ ಕಾಶ್ಮೀರದಲ್ಲಿ ಚಿತ್ರೀಕರಣದ ವೇಳೆ ಕಾರು ಅಪಘಾತ : ಇಬ್ಬರಿಗೂ ಗಾಯ

ಕಾಶ್ಮೀರ : ದಕ್ಷಿಣ ನಟರಾದ ಸಮಂತಾ ಹಾಗೂ ವಿಜಯ್ ದೇವರಕೊಂಡ ಕಾಶ್ಮೀರದಲ್ಲಿ ತಮ್ಮ ‘ಖುಶಿ’ ಚಿತ್ರದ ಚಿತ್ರೀಕರಣದಲ್ಲಿದ್ದ ಕಾರು ಅಪಘಾತಗೊಂಡ ಇಬ್ಬರು ಗಾಯಗೊಂಡ ಘಟನೆ ನಡೆದಿದೆ.

ಸಮಂತಾ ಮತ್ತು ವಿಜಯ್ ದೇವರಕೊಂಡ ಇಬ್ಬರ ಜೋಡಿಯನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ. ಅಷ್ಟೇ ಅಲ್ಲ ಸಮಂತಾ ಮತ್ತು ವಿಜಯ್ ದೇವರಕೊಂಡ ತುಂಬಾ ಒಳ್ಳೆಯ ಸ್ನೇಹಿತರು. ಮೊನ್ನೆಯಷ್ಟೇ ವಿಜಯ್ ತಮ್ಮ ಹುಟ್ಟುಹಬ್ಬದಂದು ಸಮಂತಾಗೆ ವಿಶಿಷ್ಟವಾದ ಸರ್ಪ್ರೈಸ್ ನೀಡಿದ್ದರು. ಇದನ್ನು ಸ್ವೀಕರಿಸಲು ಸಮಂತಾ ಸಹ ಉತ್ಸುಕರಾಗಿದ್ದರು. ಇತ್ತೀಚೆಗೆ ಖುಷಿ ಚಿತ್ರದ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಸಮಂತಾ ಮತ್ತು ವಿಜಯ್ ದೇವರಕೊಂಡ ಇಬ್ಬರೂ ಗಾಯಗೊಂಡಿದ್ದಾರೆ ಎಂದು ತಿಳಿಯಲಾಗಿದೆ.

ವಿಜಯ್ ದೇವರಕೊಂಡ ಅವರ ಆಪ್ತ ಮೂಲವೊಂದು ಹೇಳುವಂತೆ, ‘ಸಮಂತಾ ಮತ್ತು ವಿಜಯ್ ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಸ್ಟಂಟ್ ಸೀಕ್ವೆನ್ಸ್ ಮಾಡುತ್ತಿದ್ದಾಗ ಗಾಯಗೊಂಡಿದ್ದಾರೆ. ಆ ದೃಶ್ಯದ ಚಿತ್ರೀಕರಣ ತುಂಬಾ ಕಷ್ಟಕರವಾಗಿತ್ತು. ಲಿಡ್ಡರ್ ನದಿಯ ಎರಡೂ ಬದಿಗಳಲ್ಲಿ ಕಟ್ಟಲಾದ ಹಗ್ಗದ ಮೇಲೆ ಇಬ್ಬರೂ ಕಾರನ್ನು ಓಡಿಸಬೇಕಾಗಿತ್ತು.

ಆದರೆ ದುರದೃಷ್ಟವಶಾತ್, ವಾಹನವು ಆಳವಾದ ನೀರಿನಲ್ಲಿ ಬಿದ್ದು ಇಬ್ಬರ ಬೆನ್ನಿಗೆ ಗಾಯವಾಗಿದೆ. ಆ ದಿನವೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಭಾನುವಾರ ಸಮಂತಾ ಮತ್ತು ವಿಜಯ್ ಮತ್ತೆ ಶೂಟಿಂಗ್ ಆರಂಭಿಸಿದರು. ಈ ವೇಳೆ ಶ್ರೀನಗರದ ದಾಲ್ ಲೇಕ್ ಭಾಗದಲ್ಲಿ ಹಲವು ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ. ಚಿತ್ರತಂಡದ ಸದಸ್ಯರೊಬ್ಬರ ಬಳಿ ಚಿತ್ರೀಕರಣದ ಸಮಯದಲ್ಲಿ ಅವರು ಬೆನ್ನುನೋವಿನ ಬಗ್ಗೆ ದೂರು ನೀಡಿದರು.

ತಕ್ಷಣ ಇಬ್ಬರನ್ನೂ ದಾಲ್ ಸರೋವರದ ದಡದಲ್ಲಿರುವ ಹೋಟೆಲ್‌ಗೆ ಕರೆದೊಯ್ಯಲಾಯಿತು. ಫಿಸಿಯೋಥೆರಪಿಸ್ಟ್ ಅವರನ್ನು ಕರೆಸಲಾಗಿದ್ದು, ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಬಿಗಿ ಭದ್ರತೆಯ ನಡುವೆ ಇಬ್ಬರೂ ಶೂಟಿಂಗ್ ಮಾಡುತ್ತಿದ್ದು, ಅವರ ಹತ್ತಿರ ಯಾರೂ ಬರಲು ಬಿಡುತ್ತಿಲ್ಲ. ಶೂಟಿಂಗ್ ಮುಗಿಸಿ ಸೋಮವಾರ ಮಧ್ಯಾಹ್ನ ತಂಡ ಕಾಶ್ಮೀರದಿಂದ ಹೊರಟಿದೆ ಎಂದು ತಿಳಿಯಲಾಗಿದೆ.

No Comments

Leave A Comment