Log In
BREAKING NEWS >
ದೆಹಲಿ ಮಹಾನಗರ ಪಾಲಿಕೆ ಆಪ್ ತೆಕ್ಕೆಗೆ; 15 ವರ್ಷಗಳ ಬಿಜೆಪಿ ಆಡಳಿತ ಅಂತ್ಯ, 150ಕ್ಕೂ ಹೆಚ್ಚು ವಾರ್ಡ್ ಗಳಲ್ಲಿ ಆಪ್‌ ಕಮಾಲ್‌...

ಬಂಟ್ವಾಳ: ಮನೆ ಬೀಗ ಮುರಿದು 2.50. ಲಕ್ಷ ಮೌಲ್ಯದ ಚಿನ್ನ ಕಳವು

ಬಂಟ್ವಾಳ:ಮೇ 24. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಣಿನಾಲ್ಕೂರು ಎಂಬಲ್ಲಿ ಮನೆಯ ಮುಂಬಾಗಿಲು ಮುರಿದು ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ನಡೆದಿದೆ.

ಮಣಿನಾಲ್ಕೂರು ಗ್ರಾಮದ ನೇಲ್ಯಪಲ್ಕೆ ನಿವಾಸಿ ಕರಿಯ ಮೂಲ್ಯ ಅವರ ಮನೆಯಿಂದ ಸುಮಾರು 2.50. ಲಕ್ಷ ಮೌಲ್ಯದ 9 ಪವನ್ ಚಿನ್ನವನ್ನು ಕಳವು ಮಾಡಲಾಗಿದೆ.

ಮಣಿನಾಲ್ಕೂರು ಗ್ರಾಮದ ನೇಲ್ಯಪಲ್ಕೆ ನಿವಾಸಿ ಕರಿಯ ಮೂಲ್ಯ ಎಂಬವರ ಮಗಳು ಶ್ವೇತಾ ಮದುವೆ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಕಾರಣ ಕಿವಿಯೊಲೆ, ಕುತ್ತಿಗೆ ಚೈನ್, ಸೇರಿದಂತೆ ಇನ್ನೂ ಕೆಲವು ಚಿನ್ನಾಭರಣಗಳನ್ನು ಮನೆಯ ಕಪಾಟಿನಲ್ಲಿ ಇರಿಸಿದ್ದರು. ಮೇ.22 ರಂದು ಬೆಳಿಗ್ಗೆ 9 ಗಂಟೆ ವೇಳೆಗೆ ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ಹೋಗಿದ್ದು, ಸೋಮವಾರ ಸಂಜೆ ಮನೆಗೆ ಬಂದು ನೋಡುವಾಗ ಮುಂಬಾಗಿಲು ಮರಿದ ಸ್ಥಿತಿಯಲ್ಲಿದ್ದು, ಮನೆಯೊಳಗೆ ಹೋಗಿ ನೋಡಿದಾಗ ಕಪಾಟಿನ ಬೀಗ ಮುರಿದು ಚಿನ್ನ 2.50. ಲಕ್ಷ ಮೌಲ್ಯದ 9 ಪವನ್ ಚಿನ್ನವನ್ನು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

No Comments

Leave A Comment