Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

ಕಾಪು: ಮಾರಿಗುಡಿಗೆ ಬಹುಭಾಷಾ ಗಾಯಕಿ ವಿದೂಷಿ ನಂದಿನಿ ರಾವ್ ಭೇಟಿ

ಕಾಪು: ದೇಶ ವಿದೇಶಗಳಲ್ಲಿ ಸಂಗೀತ ಕಾರ್ಯಕ್ರಮವನ್ನು ನೀಡಿರುವ ಬಹುಭಾಷಾ ಗಾಯಕಿ ವಿದೂಷಿ ನಂದಿನಿ ರಾವ್ ಪಡುಬಿದ್ರಿ ಅವರು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದರು. 

ಈ ಸಂದರ್ಭ ದೇವಳದ ಜೀರ್ಣೋದ್ಧಾರ ಕಾರ್ಯಗಳನ್ನು ವೀಕ್ಷಿಸಿ, ತನ್ನ ಹುಟ್ಟೂರಿನಲ್ಲಿ ಆಗುತ್ತಿರುವ ಇಂತಹ ಪುಣ್ಯ ಕಾರ್ಯಕ್ಕೆ ಮುಂದಿನ ದಿನಗಳಲ್ಲಿ ತಾನು ಕೂಡಾ ಕೈಜೋಡಿಸುವುದಾಗಿ ಭರವಸೆಯನ್ನಿತ್ತರು.

ದೇವಳದ ಸಿಬ್ಬಂದಿ ಸಂತೋಷ್ ಶೆಟ್ಟಿಯವರು ಶ್ರೀ ದೇವಿಯ ಸನ್ನಿಧಾನದಲ್ಲಿ ಪ್ರಾರ್ಥಿಸಿ ಅನುಗ್ರಹ ಪ್ರಸಾದವನ್ನು ನೀಡಿದರು.

No Comments

Leave A Comment