Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಯಮುನೋತ್ರಿ ದೇವಸ್ಥಾನಕ್ಕೆ ಹೋಗುವ ಹೆದ್ದಾರಿಯ ಭದ್ರತಾ ಗೋಡೆ ಕುಸಿತ: 10 ಸಾವಿರ ಯಾತ್ರಾರ್ಥಿಗಳಿಗೆ ಸಂಕಷ್ಟ

ಡೆಹ್ರಾಡೂನ್: ಭಾರತದ ಉತ್ತರಾಖಂಡ ರಾಜ್ಯದಲ್ಲಿನ ತೀರ್ಥಕ್ಷೇತ್ರವಾದ ಯಮುನೋತ್ರಿ ಹೋಗುವ ಭದ್ರತಾ ಗೋಡೆ ಕುಸಿದು ಸುಮಾರು 10,000 ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕುಸಿತದಿಂದಾಗಿ ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, 10,000 ಜನರು ರಸ್ತೆಯ ವಿವಿಧೆಡೆ ಸಿಲುಕಿದ್ದಾರೆ. ರಸ್ತೆಯನ್ನು ಸಾರ್ವಜನಿಕರಿಗೆ ಮುಕ್ತವಾಗಿಸಲು ಮೂರು ದಿನಗಳ ಕಾಲಾವಕಾಶ ಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.

ರಸ್ತೆಯಲ್ಲಿ ಸಿಲುಕಿದ ಕೆಲವು ಚಿಕ್ಕ ವಾಹನಗಳಿಂದ ಪ್ರಯಾಣಿಕರನ್ನು ಸ್ಥಳಾಂತರಿಸಲು ಪ್ರಯತ್ನಿಸುತ್ತಿದ್ದರೂ ದೂರದಿಂದ ದೊಡ್ಡ ವಾಹನಗಳಿಗೆ ಬಂದವರು ಹೋಗಲು ಸಾಧ್ಯವಾಗುತ್ತಿಲ್ಲ.

ಯಮುನಾ ನದಿಯ ಉಗಮಸ್ಥಾನವಾದ ಯಮುನೋತ್ರಿ ಹಿಮಾಲಯದ ಅತಿ ಪವಿತ್ರ ಚತುರ್ಧಾಮಗಳ ಮೇಲೊಂದು. ಉತ್ತರಾಖಂಡದ ಮುಖ್ಯ ನಗರಗಳಾದ ಹರಿದ್ವಾರ, ಋಷಿಕೇಶ ಮತ್ತು ಡೆಹ್ರಾಡೂನ್ ಗಳಿಂದ ಪೂರ್ಣ ಒಂದು ದಿನದ ಪ್ರಯಾಣ ಮಾಡಿ ಯಮುನೋತ್ರಿಯನ್ನು ತಲುಪಿಸಲಾಗುತ್ತದೆ.

No Comments

Leave A Comment