BREAKING NEWS >
'ಶಾಸಕರ ಸಂಖ್ಯಾಬಲ ಯಾವ ಕ್ಷಣದಲ್ಲಿಯೂ ಬದಲಾಗಬಹುದು, ಸದನ ಪರೀಕ್ಷೆಯಲ್ಲಿ ಗೆದ್ದೇ ಗೆಲ್ಲುತ್ತೇವೆ': ಸಂಜಯ್ ರಾವತ್...ಅಸ್ಸಾಂ ಪ್ರವಾಹ ಪರಿಸ್ಥಿತಿ ಮತ್ತಷ್ಟು ಗಂಭೀರ; ನೀರಿನಲ್ಲಿ ಮುಳುಗಿದ ಸಿಲ್ಚಾರ್; ಸಾವಿನ ಸಂಖ್ಯೆ 108ಕ್ಕೆ ಏರಿಕೆ...

ಥಾಯ್ಲೆಂಡ್ ಓಪನ್: ಚೀನಾ ಆಟಗಾರ್ತಿ ಎದುರು ಸೋತು ಸೆಮಿಸ್‌ನಿಂದ ಹೊರಬಿದ್ದ ಪಿ.ವಿ ಸಿಂಧು!

ಬ್ಯಾಂಕಾಕ್: ಭಾರತದ ಸ್ಟಾರ್ ಷಟ್ಲರ್ ಪಿವಿ ಸಿಂಧು ಥಾಯ್ಲೆಂಡ್ ಓಪನ್‌ನ ಸೆಮಿಫೈನಲ್‌ನಲ್ಲಿ ಚೀನಾದ ಚೆನ್ ಯು ಫೀ ವಿರುದ್ಧ ಸೋತಿದ್ದಾರೆ. ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಟೋಕಿಯೊ ಒಲಿಂಪಿಕ್ ಚಿನ್ನದ ಪದಕ ವಿಜೇತೆ ಯು ಫೀ 21-17, 21-16 ನೇರ ಸೆಟ್‌ಗಳಿಂದ ಸಿಂಧು ಅವರನ್ನು ಸೋಲಿಸಿದರು.

ಗೇಮ್‌ನ ಆರಂಭಿಕ ಕ್ಷಣಗಳಲ್ಲಿ 10-15 ರಿಂದ ಯು ಫೀಗೆ ಹಿನ್ನಡೆಯಾದ ನಂತರ, ಸಿಂಧು ಪುನರಾಗಮನ ಮಾಡಿದರು.ಗೇಮ್ ಅನ್ನು 15-17 ಗೆ ತರಲು ಪ್ರಯತ್ನಿಸಿದರಾದರೂ ಚೀನಿ ಆಟಗಾರ್ತಿ ಮೊದಲ ಗೇಮ್ ಅನ್ನು 21-17 ರಿಂದ ಗೆದ್ದರು.

ಎರಡನೇ ಗೇಮ್‌ನಲ್ಲಿ ಸಿಂಧು 10-5 ರಿಂದ ಮುನ್ನಡೆ ಸಾಧಿಸಲು ಉತ್ತಮವಾಗಿ ಆರಂಭ ಪಡೆದುಕೊಂಡರು. ಆದರೆ ಎದುರಾಳಿ ಯು ಫೀ ಗೇಮ್‌ನ ದ್ವಿತೀಯಾರ್ಧದಲ್ಲಿ ಮರಳಿ ಸಿಂಧುವನ್ನು 21-16 ರಿಂದ ಸೋಲಿಸಿ ಫೈನಲ್‌ಗೆ ಮುನ್ನಡೆದರು.

ಈ ಸೋಲಿನೊಂದಿಗೆ ಸಿಂಧು ಥಾಯ್ಲೆಂಡ್ ಓಪನ್ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ. ಫೈನಲ್‌ನಲ್ಲಿ ಯು ಫೀ ತೈವಾನ್‌ನ ತೈ ತ್ಸು ಯಿಂಗ್ ಅಥವಾ ಥಾಯ್ಲೆಂಡ್‌ನ ರಚನೋಕ್ ಇಂಟನಾನ್ ಅವರನ್ನು ಎದುರಿಸಲಿದ್ದಾರೆ.

No Comments

Leave A Comment