ಯುವಕ ಹಾಗೂ ಯುವತಿ ಮನೆಗೆ ನುಗ್ಗಿ ಮಹಿಳೆಗೆ ಚೂರಿ ತೋರಿಸಿ ಚಿನ್ನಾಭರಣ ಅಪಹರಣ
ಯುವಕ ಹಾಗೂ ಯುವತಿ ಉಪ್ಪಳದ ಬಶೀರ್ ಅವರ ಮನೆಗೆ ಸ್ಕೂಟರಿನಲ್ಲಿ ಆಗಮಿಸಿ ಮನೆಯ ಮಹಿಳೆಯಲ್ಲಿ ಅತ್ತೆ ಮನೆಯಲ್ಲಿ ಇದ್ದರಾ ಎಂಬುದಾಗಿ ಪ್ರಶ್ನಿಸಿದ್ದರು. ಇದ್ದಾರೆ ಕರೆಯುತೇನೆ ಎಂಬುದಾಗಿ ಮಹಿಳೆ ಮನೆಯೊಳಗೆ ತೆರಳುತ್ತಿರುವಾಗ ಹಿಂಬಾಲಿಸಿದ ಯುವಕ ಮಹಿಳೆಗೆ ಚೂರಿ ತೋರಿಸಿ ಮೈಮೇಲಿದ್ದ ಎಲ್ಲ ಚಿನ್ನವನ್ನು ನೀಡುವಂತೆ ಬೆದರಿಸಿ ಪಡೆದುಕೊಂಡಿದ್ದ ಎಂದು ತಿಳಿಯಲಾಗಿದೆ.
ಅಷ್ಟರಲ್ಲಿ ಬಶೀರ್ ಅವರ ಪುತ್ರ ಮಸೀದಿಗೆ ತೆರಳಲು ಮಹಡಿ ಮೇಲಿನಿಂದ ಇಳಿದು ಬರುತ್ತಿರುವುದನ್ನು ಕಂಡು ಆರೋಪಿಗಳು ಬಳೆ ಸಹಿತ ಸ್ಕೂಟರಿನಲ್ಲಿ ಪರಾರಿಯಾದರು.
ಘಟನೆ ಸ್ಥಳಕ್ಕೆ ಮಂಜೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.