BREAKING NEWS >
'ಶಾಸಕರ ಸಂಖ್ಯಾಬಲ ಯಾವ ಕ್ಷಣದಲ್ಲಿಯೂ ಬದಲಾಗಬಹುದು, ಸದನ ಪರೀಕ್ಷೆಯಲ್ಲಿ ಗೆದ್ದೇ ಗೆಲ್ಲುತ್ತೇವೆ': ಸಂಜಯ್ ರಾವತ್...ಅಸ್ಸಾಂ ಪ್ರವಾಹ ಪರಿಸ್ಥಿತಿ ಮತ್ತಷ್ಟು ಗಂಭೀರ; ನೀರಿನಲ್ಲಿ ಮುಳುಗಿದ ಸಿಲ್ಚಾರ್; ಸಾವಿನ ಸಂಖ್ಯೆ 108ಕ್ಕೆ ಏರಿಕೆ...

ಕಾನ್ ಫಿಲ್ಮ್​ ಫೆಸ್ಟಿವಲ್‌ನಲ್ಲಿ ಪೂಜಾ ಹೆಗ್ಡೆ, ದೀಪಿಕಾ ಪಡುಕೋಣೆ ಮಿಂಚಿಂಗ್

ಬೆಂಗಳೂರು:ಮೇ 20. ಪ್ರಸಿದ್ಧ ಸಿನಿಮೋತ್ಸವ ಕಾನ್ ಫೆಸ್ಟಿವಲ್ ಪ್ರಾರಂಭವಾಗಿದ್ದು, ಈ ಕಾನ್ ಫೆಸ್ಟಿವಲ್‌ನಲ್ಲಿ ಭಾರತೀಯ ಸಿನಿಮಾ ರಂಗದ ಖ್ಯಾತ ತಾರೆಯರು ಭಾಗಿಯಾಗಿದ್ದು ಅದರಲ್ಲಿಯೂ ನಟಿಯರಾದ ಪೂಜಾ ಹೆಗ್ಡೆ, ದೀಪಿಕಾ ಪಡುಕೋಣೆ ಸಖತ್ ಮಿಂಚಿದ್ದು, ಅವರ ಪೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ದಕ್ಷಿಣ ಭಾರತದ ನಟಿ ಪೂಜಾ ಹೆಗ್ಡೆ ಫೋಟೋಗಳು ಟ್ವಿಟ್ಟರ್‌ನಲ್ಲಿ ಟ್ರೇಂಡಿಂಗ್‌ನಲ್ಲಿದ್ದು, ಪೂಜಾ ಲುಕ್ಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇನ್ನು ಈ ಕಾರ್ಯಕ್ರಮಕ್ಕೆ ಜ್ಯೂರಿ ಆಗಿ ತೆರಳಿರುವ ದೀಪಿಕಾ ಪಡುಕೋಣೆ ಅವರು ನಿತ್ಯ ಒಂದೊಂದು ರೀತಿಯ ಉಡುಗೆ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಈ ಬಾರಿ ನಡೆಯುತ್ತಿರುವ 75ನೇ ಕಾನ್​ ಫಿಲ್ಮ್​ ಫೆಸ್ಟಿವಲ್​ನಲ್ಲಿ ಭಾರತಕ್ಕೆ ವಿಶೇಷ ಗೌರವ ಸಿಕ್ಕಿದ್ದು, ಭಾರತಕ್ಕೆ ಸಿಕ್ಕಿರುವ ಗೌರವದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಪತ್ರ ಬರೆದಿದ್ದಾರೆ.

No Comments

Leave A Comment