Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಕಡಿಯಾಳಿ ಶ್ರೀಮಹಿಷಮರ್ದಿನಿ ದೇಗುಲ ಬ್ರಹ್ಮಕಲಶೋತ್ಸವಕ್ಕೆ ಅದ್ದೂರಿಯ ಚಪ್ಪರ ಮುಹೂರ್ತ ಸಂಪನ್ನ…

ಉಡುಪಿ: ಮೇ 20. ಸಮಗ್ರ ಜೀರ್ಣೋದ್ಧಾರ ಗೊಳ್ಳುತ್ತಿರುವ ಕಡಿಯಾಳಿ ಶ್ರೀಮಹಿಷಮರ್ದಿನಿ ದೇಗುಲದ ಬ್ರಹ್ಮಕಲಶೋತ್ಸವ ಜೂನ್ 1 ರಿಂದ 10ರ ತನಕ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ದೇಗುಲದ ಆವರಣದಲ್ಲಿ ದೇವಸ್ಥಾನದ ಪ್ರಧಾನ ತಂತ್ರಿಗಳಾದ ಪಾಡಿಗಾರು ಶ್ರೀನಿವಾಸ ತಂತ್ರಿಗಳ ನೇತೃತ್ವದಲ್ಲಿ ಅರ್ಚಕರಾದ ರಾಧಾಕೃಷ್ಣ ಉಪಾಧ್ಯಾಯ, ಶ್ರೀನಿಧಿ ಉಪಾಧ್ಯಾಯ ಅವರ ಪೌರೋಹಿತ್ಯದಲ್ಲಿ ಗುರುವಾರ ಮೇ.19ರ೦ದು ಚಪ್ಪರ ಮುಹೂರ್ತ ನೆರವೇರಿತು.

ಮೂಡಬಿದ್ರೆಯ ಜಿಕೆ ಡೆಕೋರೇಟರ್ಸ್ನ ಗಣೇಶ ಕಾಮತ್ ಅವರಿಗೆ ಚಪ್ಪರ ನಿರ್ಮಿ ಸಲು ವೀಳ್ಯೆ ನೀಡಲಾಯಿತು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ ,ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರವಿರಾಜ ಆಚಾರ್ಯ, ದೇವಸ್ಥಾನದ ಪವಿತ್ರಪಾಣಿ ಕುಂಜಿತ್ತಾಯ ಶ್ರೀನಿವಾಸ ಉಪಾಧ್ಯಾಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಾಗೇಶ್ ಹೆಗ್ಡೆ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಪುರುಷೋತ್ತಮ್ ಪಿ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ರಾಘವೇಂದ್ರ ಕಿಣಿ, ನಗರಸಭಾ ಸದಸ್ಯರಾದ ಗಿರೀಶ್ ಅಂಚನ್ , ಶ್ರೀಮತಿ ಗೀತಾ ಶೇಟ್, ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯರಾದ ಯು ಮೋಹನ್ ಉಪಾಧ್ಯ, ಹೊರಕಾಣಿಕೆ ಸಮಿತಿ ಅಧ್ಯಕ್ಷರಾದ ಭಾಸ್ಕರ್ ಶೇರಿಗಾರ್, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಕೆ ಕಾಮತ್, ಬ್ರಹ್ಮಕಲಶೋತ್ಸವ ಸಮಿತಿಯ ಕೋಶಾಧಿಕಾರಿ ಎಂ ವಲ್ಲಭ ಭಟ್,ವ್ಯವಸ್ಥಾಪನ ಸಮಿತಿಯ ಸದಸ್ಯರಾದ ನಾಗರಾಜಶೆಟ್ಟಿ , ಮಂಜುನಾಥ ಹೆಬ್ಬಾರ್ , ಕಿಶೋರ್ ಸಾಲಿಯಾನ್, ಗಣೇಶ ನಾಯ್ಕ, ರಮೇಶ್ ಶೇರಿಗಾರ್ ಬೈಲಕೆರೆ ,ಶ್ರೀಮತಿ ಸಂಧ್ಯಾ ಪ್ರಭು ಶ್ರೀಮತಿ ಶಶಿಕಲಾ ಭರತ್, ಜೀರ್ಣೋದ್ಧಾರ ಸಮಿತಿ ಜೊತೆ ಕಾರ್ಯದರ್ಶಿ ಸತೀಶ್ ಕುಲಾಲ್ ಕಡಿಯಾಳಿ, ಜೀರ್ಣೋದ್ಧಾರ ಸಮಿತಿ ಸದಸ್ಯರಾದ ರಾಮಚಂದ್ರ ಸನಿಲ್, ಶ್ರೀಮತಿ ಭಾರತಿ ಚಂದ್ರಶೇಖರ್, ಶ್ರೀಮತಿ ಪದ್ಮ ರತ್ನಾಕರ್, ಅರ್ಚಕರಾದ ಶ್ರೀಹರಿ ಉಪಾಧ್ಯ,ಕೆ ಸಂತೋಷ್ ಕಿಣಿ,ಅಶ್ವತ್ಥ ದೇವಾಡಿಗ , ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿಗಳಾದ ಮನೀಶ್ ಜತ್ತನ್ನ , ಶ್ರೀಮತಿ ಸುಜಲಾ ಸತೀಶ್, ರಾಕೇಶ ಜೋಗಿ, ಗಣೇಶ್ ಆಚಾರ್ಯ ಕಡಿಯಾಳಿ ಭಜನಾ ತಂಡದ ನಾಯಕರಾದ ಜೀವರತ್ನ ದೇವಾಡಿಗ, ಶ್ರೀಮತಿ ಸುಮಲತಾ ಉದಯ್, ಶ್ರೀಮತಿ ಅಶ್ವಿನಿ ಪೈ, ಶ್ರೀಮತಿ ಶಕುಂತಳಾ ಶೆಟ್ಟಿ, ಶ್ರೀಮತಿ ಗೀತಾ ನಾಯಕ್, ರಾಷ್ಟ್ರೀಯ ಮಹಿಳಾ ಆಯೋಗದ ನಿಕಟಪೂರ್ವ ಸದಸ್ಯೆ ಶ್ರೀಮತಿ ಶ್ಯಾಮಲಾ ಕುಂದರ್, ಉಪಸ್ಥಿತರಿದ್ದರು.

ಮೇ 21ರ ಶನಿವಾರದ೦ದು ಸಾಯ೦ಕಾಲ 5ಕ್ಕೆ ಉಡುಪಿಯ ಚಿತ್ತರ೦ಜನ್ ದಾಸ್ ಸರ್ಕಲಿನಿ೦ದ ದೇವಸ್ಥಾನಕ್ಕೆ ಬೆಳ್ಳಿಯ ಮುಖ್ಯದ್ವಾರ ಹಾಗೂ ಬಾಗಿಲಿನ ಮೆರವಣಿಗೆಯು ನಡೆಯಲಿದೆ.

No Comments

Leave A Comment