Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಹೆಬ್ರಿ: ಎತ್ತಿ ಆಡಿಸುವ ವೇಳೆ ಕೈ ಜಾರಿ ಬಿದ್ದ ಮಗು – ಗಂಭೀರ ಗಾಯ

ಹೆಬ್ರಿ:ಮೇ, 20. ಎರಡೂವರೆ ವರ್ಷದ ಮಗುವನ್ನು ಎತ್ತಿ ಆಡಿಸುವ ವೇಳೆ ಮಗು ಕೈ ಜಾರಿ ಕೆಳಗೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡ ಘಟನೆ ಹೆಬ್ರಿಯ ಶಿವಪುರ ಗ್ರಾಮದ ಮುಳ್ಳುಗುಡ್ಡೆಯಲ್ಲಿ ನಡೆದಿದೆ.

ಜನತಾ ಕಾಲನಿಯ ಕೃಷ್ಣ -ಶಕುಂತಳಾ ದಂಪತಿಯ ಪುತ್ರಿ ಸಾಕ್ಷಿ (2.6 ವ) ಗಂಭೀರ ಗಾಯಗೊಂಡ ಮಗು.

ಮಂಗಳವಾರ ರಾತ್ರಿ ಮನೆಯ ಸಮೀಪದಲ್ಲಿ ಗುಡ್ಡದ ದೈವಕ್ಕೆ ತಂಬಿಲ ಇದ್ದ ಕಾರಣ ಸಂಬಂಧಿಕ ರಾಜು ಎಂಬುವರು ಬಂದಿದ್ದರು. ಮನೆಯ ಚಾವಡಿಯಲ್ಲಿ ಮಗು ಆಟವಾಡುತ್ತಿರುವಾಗ ರಾಜು ಮಗುವನ್ನು ಎರಡು ಕೈಯಿಂದ ಎತ್ತಿ ಆಡಿಸಿದ್ದಾರೆ. ಈ ವೇಳೆ ರಾಜು ಕೈಯಿಂದ ಮಗು ನೆಲಕ್ಕೆ ಜಾರಿ ಬಿದ್ದ ಪರಿಣಾಮವಾಗಿ ಮಗುವಿನ ಎಡ ಕಿವಿಯ ಬಳಿ ತೀವ್ರಸ್ವರೂಪದ ಗಾಯಗಳಾಗಿವೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment