Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ತೆಲುಗು ನಟ ಆದಿ ಪಿನಿಶೆಟ್ಟಿ ಜೊತೆ ಸಪ್ತಪದಿ ತುಳಿದ ನಟಿ ನಿಕ್ಕಿ ಗಲ್ರಾನಿ

ಚೆನ್ನೈ: ನಟಿ ಸಂಜನಾ ಗಲ್ರಾನಿ ಅವರ ಸಹೋದರಿ ನಟಿ ನಿಕ್ಕಿ ಗಲ್ರಾನಿ ಅವರು ತೆಲುಗು ನಟ, ಬಹುಕಾಲದ ಗೆಳೆಯ ಆದಿ ಪಿನಿಶೆಟ್ಟಿ ಅವರೊಟ್ಟಿಗೆ ಚೆನ್ನೈನಲ್ಲಿ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ.

ಆಂದ್ರ ಸಂಪ್ರದಾಯದ ಪ್ರಕಾರ ವಿವಾಹವಾಗಿರುವ ಈ ಜೋಡಿಯ ಅದ್ದೂರಿ ಮದುವೆಯ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿಯ ವಿವಾಹ, ಮೆಹಂದಿ ಹಾಗೂ ಮದುವೆ ಸಮಾರಂಭದ ಪೋಟೊಗಳು ನಿಕ್ಕಿ ಮತ್ತು ಆದಿ ಪಿನಿಶೆಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಬುಧವಾರ (ಮೇ 18) ಚೆನ್ನೈನಲ್ಲಿ ಮದುವೆಯಾಗಿದ್ದಾರೆ. ಈ ವಿವಾಹ ಕಾರ್ಯಕ್ರಮಕ್ಕೆ ಎರಡು ಕುಟುಂಬಗಳ ಸದಸ್ಯರು ಮತ್ತು ಆಪ್ತರು ಮಾತ್ರವೇ ಭಾಗವಹಿಸಿದ್ದರು. ತೀರ ಖಾಸಗಿಯಾಗಿ ನಡೆದ ಈ ಮದುವೆ ಅದ್ದೂರಿಯಾಗಿ ನಡೆದಿದೆ ಎಂದು ಅವರು ಆಪ್ತರು ಹೇಳಿದ್ದಾರೆ.

2022ರ ಮಾರ್ಚ್‌ 23ರಂದು ಮನೆ ಮಂದಿಯ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಕನ್ನಡದ ಅಜಿತ್‌, ಓ ಪ್ರೇಮವೇ, ಜಂಬೂ ಸವಾರಿ, ಸಿದ್ಧಾರ್ಥ ಸಿನಿಮಾಗಳಲ್ಲಿ ನಿಕ್ಕಿ ನಟಿಸಿದ್ದಾರೆ. ಸದ್ಯ ಅವರು ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಅವರು ಹೆಚ್ಚು ನಟಿಸುತ್ತಿದ್ದಾರೆ. ನಟ ಆದಿ ಪಿನಿಶೆಟ್ಟಿ ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.

No Comments

Leave A Comment