BREAKING NEWS >
ಕರಾವಳಿಯಲ್ಲಿ ಮು೦ದುವರಿದ ಮಳೆ-ತಗ್ಗು ಪ್ರದೇಶಗಳಲ್ಲಿ ಏರುತ್ತಿರುವ ಮಳೆಯ ನೀರಿನ ಮಟ್ಟ....

ಸಿಂಡಿಕೇಟ್ ಬ್ಯಾಂಕಿನ ನಿವೃತ್ತರಾಗಿದ್ದ ರಮಾ ಶೆಟ್ಟಿಗಾರ್ ನಿಧನ

ಉಡುಪಿ:ಸಿಂಡಿಕೇಟ್ ಬ್ಯಾಂಕಿನ ಉದ್ಯೋಗಿಯಾಗಿ ಮಣಿಪಾಲ ಕೇಂದ್ರಕಛೇರಿಯಲ್ಲಿ ಸುಮಾರು ನಾಲ್ಕುದಶಕಗಳ ಕಾಲ ಸೇವೆ ಮಾಡಿ ನಿವೃತ್ತರಾಗಿದ್ದ ಶ್ರೀಮತಿ ರಮಾ ಶೆಟ್ಟಿಗಾರ್ (67) ಅಲ್ಪಕಾಲದ ಅಸೌಖ್ಯದಿಂದ ಇಂದು (18-05-2022) ನಿಧನ ಹೊಂದಿದರು. ಉಡುಪಿಯ ಕೊಡಂಕೂರಿನವರಾದ ಅವರು ಅವಿವಾಹಿತರಾಗಿದ್ದು ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳೊಂದಿಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದ್ದರು.

ಉಡುಪಿ ಯಕ್ಷಗಾನ ಕಲಾರಂಗದ ಸದಸ್ಯರಾಗಿ ವಿದ್ಯಾಪೋಷಕ್ ದಾನಿಯಾಗಿದ್ದರು. ಅವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಮ್. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

No Comments

Leave A Comment