ಕಾರು ಚಾಲಕನನ್ನು ಬಾಡಿಗೆಯ ನೆಪದಲ್ಲಿ ಕರೆದುಕೊಂಡು ಹೋಗಿ ಸುಲಿಗೆ ಪ್ರಕರಣ : ಮಣಿಪಾಲ ಪೊಲೀಸರಿಂದ ನಾಲ್ಕು ಮಂದಿ ಆರೋಪಿಗಳ ಬಂಧನ
ಮಣಿಪಾಲ : ಉಡುಪಿ ನಗರದ ಮಣಿಪಾಲ ಸಮೀಪದಲ್ಲಿ ಕಾರಿನ ಚಾಲಕನನ್ನು ಬಾಡಿಗೆಯ ನೆಪದಲ್ಲಿ ನಾಲ್ಕು ಜನ ಕರೆದುಕೊಂಡು ಹೋಗಿ ಆತನ ಬಳಿ ಸುಲಿಗೆ ಮಾಡಿದ್ದ ಆರೋಪಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಉಳ್ಳಾಲದ ನಿವಾಸಿ ಚರಣ್,ಶಿರ್ವ ನಿವಾಸಿ ಅಝರುದ್ದೀನ್,ಬಂಟ್ವಾಳ ನಿವಾಸಿ ಶರತ್ ಪೂಜಾರಿ ಹಾಗೂ ಮಂಗಳೂರಿನ ನಿವಾಸಿ ಜಯಪ್ರಸಾದ್ ಎಂದು ತಿಳಿದು ಬಂದಿದೆ.
ಕಾರಿನ ಚಾಲಕರಾದ ಶಾಂತಿನಗರದ ನಿವಾಸಿ ಶ್ರೀಧರ್ ಭಕ್ತ ಎಂಬವರನ್ನು ನಾಲ್ಕು ಮಂದಿ ಆರೋಪಿಗಳು ಮಣಿಪಾಲದಿಂದ ಕಾರವಾರಕ್ಕರ ಬಾಡಿಗೆ ಗೊತ್ತು ಮಾಡಿ ಕರೆದುಕೊಂಡು ಹೋಗಿ ನಂತರ ಅಂಕೋಲ ಸಮೀಪ ಯಾರು ಇಲ್ಲದ ವೇಳೆಯಲ್ಲಿ ಕಾರು ನಿಲ್ಲಿಸಲು ಹೇಳಿ, ಕುತ್ತಿಗೆ ಒತ್ತಿ ಹಿಡಿದು ಚಾಕು ತೋರಿಸಿ ಅವರ ಬಳಿ ಇದ್ದ ಹಣ ಮತ್ತು ವಸ್ತುಗಳನ್ನು ದೋಚಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಮಣಿಪಾಲ ಪೊಲೀಸರು ನಂತರ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿ ಅವರಿಂದ ನಗದು ಮತ್ತು ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಾನ್ಯ ಉಡುಪಿ ಪೊಲೀಸ್ ಅಧೀಕ್ಷರು ಶ್ರೀ ವಿಷ್ಣುವರ್ಧನ್ ಐ ಪಿ ಸ್ ರವರು ಹಾಗೂ ಹೆಚ್ಚುವರಿ ಎಸ್ ಪಿ ಶ್ರೀ ಸಿದ್ದಲಿಂಗಪ್ಪ ನವರ ಮಾರ್ಗದರ್ಶನ ದಲ್ಲಿ.. ಉಡುಪಿ ಉಪವಿಭಾಗದ ಡಿ ವಾಯ್ ಎಸ್ ಪಿ ಶ್ರೀ ಸುಧಾಕರ್ ನಾಯಕ್ ರವರ ನೇತೃತ್ವದಲ್ಲಿ ಮಣಿಪಾಲ ಪೊಲೀಸ್ ನಿರೀಕ್ಷಕ ರಾದ ಮಂಜುನಾಥ್.. ಉಪ ನಿರೀಕ್ಷಕ ರಾದ ರಾಜಶೇಖರ್, ಸಿಬ್ಬಂದಿಗಳಾದ ಶೈಲೇಶ್, ನಾಗೇಶ್ ನಾಯ್ಕ್,,ಪ್ರಸನ್ನ,ಇಮ್ರಾನ್, ಪ್ರಸಾದ್ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.