BREAKING NEWS >
'ಶಾಸಕರ ಸಂಖ್ಯಾಬಲ ಯಾವ ಕ್ಷಣದಲ್ಲಿಯೂ ಬದಲಾಗಬಹುದು, ಸದನ ಪರೀಕ್ಷೆಯಲ್ಲಿ ಗೆದ್ದೇ ಗೆಲ್ಲುತ್ತೇವೆ': ಸಂಜಯ್ ರಾವತ್...ಅಸ್ಸಾಂ ಪ್ರವಾಹ ಪರಿಸ್ಥಿತಿ ಮತ್ತಷ್ಟು ಗಂಭೀರ; ನೀರಿನಲ್ಲಿ ಮುಳುಗಿದ ಸಿಲ್ಚಾರ್; ಸಾವಿನ ಸಂಖ್ಯೆ 108ಕ್ಕೆ ಏರಿಕೆ...

ಕಾರು ಢಿಕ್ಕಿ : ಏಳು ಎಮ್ಮೆಗಳು ಸ್ಥಳದಲ್ಲೇ ಮೃತ್ಯು

ಶಿವಮೊಗ್ಗ:  ಕಾರು ಢಿಕ್ಕಿಯಾಗಿ ಏಳು ಎಮ್ಮೆಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಗಾಡಿಕೊಪ್ಪದ ತುಂಗಾ ನಾಲೆ ಬಳಿ ನಡೆದಿದೆ. ಘಟನೆ ವೇಳೆ ಕಾರಿನಲ್ಲಿದ್ದ ಇಬ್ಬರು ಅದೃಷ್ಟವಶಾತ್ ಪಾರಾಗಿದ್ದಾರೆ.

ಶಿವಮೊಗ್ಗದಿಂದ ಆಯನೂರು ಕಡೆಗೆ ತೆರಳುತ್ತಿದ್ದ ಕಾರು ಎಮ್ಮೆಗಳಿಗೆ ಢಿಕ್ಕಿ ಹೊಡೆದಿದ್ದು, ಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ. ರಸ್ತೆ ಮಧ್ಯೆ ಎಮ್ಮೆಗಳು ತೆರಳುತ್ತಿರುವುದು ಗೊತ್ತಾಗದೆ ಢಿಕ್ಕಿ ಹೊಡೆದು ಘಟನೆಯಲ್ಲಿ ಏಳು ಎಮ್ಮೆಗಳು ಸ್ಥಳದಲ್ಲೇ ಮೃತಪಟ್ಟಿವೆ.

 ಆದರೆ ಕಾರಿನಲ್ಲಿದ್ದ ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಕಾರಿನಲ್ಲಿದ್ದ ಇಬ್ಬರೂ ಪಾರಾಗಿದ್ದಾರೆ. ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೀಗ ಸಂಚಾರಿ ಠಾಣೆ ಪೊಲೀಸರಿಂದ ಎಮ್ಮೆಗಳ ಮಾಲೀಕರ ಪತ್ತೆ ಕಾರ್ಯ ನಡೆಯುತ್ತಿದೆ.

No Comments

Leave A Comment