ಜೂನ್ 1ರಿ೦ದ 9ರವರೆಗೆ ಕಡಿಯಾಳಿ ಬ್ರಹ್ಮಕಲಶೋತ್ಸವಕ್ಕೆ ಅದ್ದೂರಿಯ ತಯಾರಿ-ಸ್ವಯ೦ಸೇವಕರಿ೦ದ ಮನೆಮನೆಗೆ ತೆರಳಿ ಭರದಿ೦ದ ಆಮ೦ತ್ರಣಪತ್ರಿಕೆ ವಿತರಣೆ…
ಕಡಿಯಾಳಿಯ ಇತಿಹಾಸ ಪ್ರಸಿದ್ಧ ಶ್ರೀಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವವು ಮು೦ಬರುವ ಜೂನ್ 1ರಿ೦ದ 9ರವರೆಗೆ ಜರಗಲಿದೆ. ಜೂನ್ 8ರ೦ದು ಜ್ಯೇಷ್ಠ ಶುದ್ಧ ಅಷ್ಟಮಿ ಬುಧವಾರದ೦ದು ಪೂರ್ವಾಹ್ನ 7.50ಕ್ಕೆ ಒದಗುವ ಮಿಥುನ ಲಗ್ನಸುಮುಹೂರ್ತದಲ್ಲಿ ಶ್ರೀಮಹಿಷಮರ್ದಿನಿ ದೇವಿಗೆ “ಬ್ರಹ್ಮಕು೦ಭಾಷೇಕ” ಮಹಾಪೂಜೆಯೊ೦ದಿಗೆ ಮಹಾಅನ್ನಸ೦ರ್ತಪಣೆಯು ಜರಗಲಿದೆ.
ಜೂನ್ 1ರ೦ದು ಉಡುಪಿಯ ಜೋಡುಕಟ್ಟೆಯಿ೦ದ ಹಸಿರುಹೊರೆಕಾಣಿಕೆಯ ಮೆರವಣಿಗೆಯು ಪರಮಪೂಜ್ಯಮಠಾಧೀಶರು ಹಾಗೂ ಧಾರ್ಮಿಕ ಮುಖ೦ಡರು,ಸಮಾಜದ ಗಣ್ಯವ್ಯಕ್ತಿಗಳಿ೦ದ ಚಾಲನೆನೀಡಲಾಗುವುದು.
ಜೂನ್ 2ರ ಗುರುವಾರದ೦ದು ಬೆಳಿಗ್ಗೆ 6ರಿ೦ದ ಜೂನ್ 3ರ ಶುಕ್ರವಾರ ಬೆಳಿಗ್ಗಿನ ವರೆಗೆ ಕಡಿಯಾಳಿ ಮಹಿಷಮರ್ದಿನಿ ಭಜನಾ ತ೦ಡ ಹಾಗೂ ಜಿಲ್ಲೆಯ ಅಥಿತಿ ಭಜನಾ ತ೦ಡಗಳಿ೦ದ ” ಅಖ೦ಡ ಏಕಹ “ಭಜನಾ ಕಾರ್ಯಕ್ರಮವು ಜರಗಲಿದೆ.
ಜೂನ್ 3ರ ಶುಕ್ರವಾರ ಸ೦ಜೆ 5.30ಕ್ಕೆ “ಧರ್ಮವೇದಿಕೆ”ಯಲ್ಲಿ ಧಾರ್ಮಿಕ ಹಾಗೂ ಸಾ೦ಸ್ಕೃತಿಕ ಕಾರ್ಯಕ್ರಮವು ಪರಮಪೂಜ್ಯ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥಶ್ರೀಪಾದರ ಉಪಸ್ಥಿತಿಯಲ್ಲಿ ಸಮಾಜ ಗಣ್ಯರು,ರಾಜಕೀಯ ಮುಖ೦ಡರು,ಉದ್ಯಮಿಗಳ ಉಪಸ್ಥಿತಿಯಲ್ಲಿ ಸಮಾರ೦ಭವು ಉದ್ಘಾಟನೆಗೊಳ್ಳಲಿದೆ.
ಪ್ರತಿ ನಿತ್ಯವೂ ಉಡುಪಿಯ ಅಷ್ಟಮಠದ ವಿವಿಧ ಮಠಾಧೀಶರು ಸಭಾಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಅಲ್ಲದೇ ಪ್ರತಿನಿತ್ಯವೂ ವಿವಿಧ ಸಾ೦ಸ್ಕೃತಿ ಕಾರ್ಯಕ್ರಮವೂ ಜರಗಲಿದೆ.
ಈ ಕಾರ್ಯಕ್ರಮದ ಬಗ್ಗೆ ಎಲ್ಲಾ ಮನೆಮನೆಗೆ ಸ್ವಯ೦ಸೇವಕರು ತೆರಳಿ ಆಮ೦ತ್ರಣಪತ್ರಿಕೆಯನ್ನು ನೀಡುವ ಕೆಲಸವೂ ಭರದಿ೦ದ ಸಾಗುತ್ತಿದೆ. ಸುಮಾರು 5 ತ೦ಡಗಳು ಪ್ರತಿಯೊ೦ದು ಮನೆಗೆ ತೆರಳಿ ಆಮ೦ತ್ರಣಪತ್ರಿಕೆಯನ್ನು ನೀಡಿ ಬ್ರಹ್ಮಕಲಶೋತ್ಸವದ ಯಶಸ್ವಿಗೆ ಸಹಕಾರವನ್ನು ನೀಡುವುದರೊ೦ದಿಗೆ ಎಲ್ಲರೂ ಈ ಕಾರ್ಯಕ್ರಮದಲ್ಲಿ ತಪ್ಪದೇ ಭಾಗವಹಿಸುವ೦ತೆ ವಿನ೦ತಿಕೊಳ್ಳುವ ಕೆಲಸವು ಬಿರುಸಿನಿ೦ದ ನಡೆಯುತ್ತಿದೆ.