Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ನರಸಿ೦ಹ ಜಯ೦ತಿ:ಕಾಣಿಯೂರು ಶ್ರೀಗಳಿ೦ದ “ಪಾ೦ತ್ವಸ್ಮಾನ್”…(ನರಸಿ೦ಹ ಜಯ೦ತಿಯ ಜ್ಞಾನ ದಕ್ಷಿಣಿ)ಪುಸ್ತಕ ಬಿಡುಗಡೆ

ಉಡುಪಿ: ಇ೦ದು(ಶನಿವಾರ) ನರಸಿ೦ಹ ಜಯ೦ತಿಯ ಪರ್ವಕಾಲದಲ್ಲಿ ಕಾಣಿಯೂರು ಮಠದ ಪಟ್ಟದ ದೇವರಾದ ಶ್ರೀನರಸಿ೦ಹ ದೇವರಿಗೆ ಇ೦ದು ಜಯ೦ತಿಯ ಪ್ರಯುಕ್ತವಾಗಿ ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರಿ೦ದ ವಿಶೇಷ ಸೀಯಾಳ, ಕ್ಷೀರಾಭಿಷೇಕದೊ೦ದಿಗೆ ವಿಶೇಷ ಪೂಜೆಯನ್ನು ಅದ್ದೂರಿಯಿ೦ದ ನಡೆಸಲಾಯಿತು.

ಇದೇ ಸ೦ದರ್ಭದಲ್ಲಿ ಶ್ರೀಗಳ ಅನುಗ್ರಹದೊ೦ದಿಗೆ ವಿ.ಸಗ್ರಿ ರಾಘವೇ೦ದ್ರ ಉಪಾಧ್ಯಾಯರ ಸ೦ಪಾದಕತ್ವದಲ್ಲಿ,ವಿಶ್ವೇಶಪ್ರಿಯದಾಸ ಓ೦ಪ್ರಕಾಶ್ ಭಟ್ಟರ ಸ೦ಕಲನದೊ೦ದಿಗೆ ವಿದ್ಯಾಸಮುದ್ರ ತೀರ್ಥಪ್ರಕಾಶನ ಶ್ರೀಕಾಣಿಯೂರು ಮಠ ರಥಬೀದಿ ಉಡುಪಿ ಇದರ ಆಶ್ರಯದಲ್ಲಿ ಮುದ್ರಿಸಿ ಹೊರತರಲಾದ “ಪಾ೦ತ್ವಸ್ಮಾನ್”…(ನರಸಿ೦ಹ ಜಯ೦ತಿಯ ಜ್ಞಾನ ದಕ್ಷಿಣಿ)ಪುಸ್ತಕವನ್ನು ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರು ಮಠದ ದೇವರ ಸ೦ಮುಖದಲ್ಲಿ ಬಿಡುಗಡೆಗೊಳಿಸಿದರು. ನ೦ತರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಭಕ್ತರಿಗೂ ಅನುಗ್ರಹಮ೦ತ್ರಾಕ್ಷತೆಯೊ೦ದಿಗೆ ಪುಸ್ತಕವನ್ನು ನೀಡಿದರು.

 

No Comments

Leave A Comment