Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಉಡುಪಿ ಶ್ರೀಕೃಷ್ಣನ ತೊಟ್ಟಿಲ ಸೇವೆ ನೋಡುತ್ತಿದ್ದ೦ತೆ ಬ್ಯಾಗ್ ನಿ೦ದ ಲಕ್ಷಾ೦ತರ ರೂ ಬೆಲೆಬಾಳುವ ಚಿನ್ನದ ಆಭರಣ ಕಳವು…

ಉಡುಪಿ: ಪಿರ್ಯಾದಿದಾರರಾದ ಷಣ್ಮುಗಂ (41) ತಂದೆ: ದಿ. ಮಾರಪ್ಪ ವಾಸ: ನಂಬ್ರ: 248, ಮಾಹಿಧರ ಪಾರ್ಚೂನ, ಸಿಟಿ ಟೋಲ್‌ಗೇಟ್‌ ಬಳಿ, ಅತ್ತಿಬೆಲೆ, ಚಿಕ್ಕನಹಳ್ಳಿ, ಇವರು ತನ್ನ ಸಂಸಾರದೊಂದಿಗೆ ದಿನಾಂಕ 13/05/2022 ರಂದು ಸಂಜೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದು, ತದನಂತರ 19:46 ಗಂಟೆಗೆ ಕೃಷ್ಣಮಠದ ವಸಂತ ಮಂಟಪದ ಬಳಿ ತೊಟ್ಟಿಲು ಸೇವೆ ನಡೆಯುತ್ತಿದ್ದು, ದೇವರ ಆರತಿಯನ್ನು ಪಡೆಯುವಾಗ ಯಾರೋ ಕಳ್ಳರು ಷಣ್ಮುಗಂ ರವರ ಹೆಂಡತಿಯ ವ್ಯಾನಿಟಿ ಬ್ಯಾಗ್‌ನ ಜಿಪ್‌ನ್ನು ತೆಗೆದು, ಅದರೊಳಗಿದ್ದ ಚಿನ್ನಾಭರಣ ಹಾಕಿದ್ದ ಬಾಕ್ಸ್‌ ನ್ನು ಕಳವು ಮಾಡಿದ್ದು

ಸದ್ರಿ ಬಾಕ್ಸ್‌ ನಲ್ಲಿ 58 ಗ್ರಾಂ ತೂಕದ ಬಳೆಗಳು-2, 16 ಗ್ರಾಂ ತೂಕದ ಕಿವಿಯೊಲೆ-2, 13 ಗ್ರಾಂ ತೂಕದ ಮಗುವಿನ ಚಿಕ್ಕ ಬಳೆ-1, 20 ಗ್ರಾಂ ತೂಕದ ಪೆಂಡೆಂಟ್‌ ಇರುವ ಚಿನ್ನದ ಸರ-1, 48 ಗ್ರಾಂ ತೂಕದ ದೊಡ್ಡ ಚಿನ್ನದ ಸರ -1 ಒಟ್ಟು 155 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ರೂಪಾಯಿ 6,30,000/- ಆಗಬಹುದುದಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 80/2022 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No Comments

Leave A Comment