Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಖಾಲಿಯಾಗಲಿರುವ ವಿಧಾನ ಪರಿಷತ್ ಪದವೀಧರ, ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ಫಿಕ್ಸ್: ಜೂನ್ 13ರಂದು ಮತದಾನ

ಬೆಂಗಳೂರು: ಜುಲೈ 4 ರಂದು ಖಾಲಿಯಾಗಲಿರುವ ವಿಧಾನ ಪರಿಷತ್ ನಾಲ್ಕು ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗ ಗುರುವಾರ ಚುನಾವಣಾ ವೇಳಾಪಟ್ಟಿ ಘೋಷಿಸಿದೆ.

ಎರಡು ಪದವೀಧರ ಕ್ಷೇತ್ರಗಳು ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳಿಗೆ ಜೂನ್ 13ರಂದು ಮತದಾನ ನಡೆಯಲಿದ್ದು, ಜೂನ್ 15 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣೆ ಆಯೋಗ ತಿಳಿಸಿದೆ.

ಈ ನಾಲ್ಕು ಸ್ಥಾನಗಳಿಗೆ ಮೇ 19 ರಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಲಿದೆ. ಮೇ 26 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. ಜೂನ್ 15-17ವರೆಗೆ ಚುನಾವಣೆ ಫಲಿತಾಂಶ ಪ್ರಕ್ರಿಯೆ ನಡೆಯಲಿದೆ.

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಕೆ.ಟಿ ಶ್ರೀಕಂಠೇಗೌಡ, ಹನುಮಂತ ನಿರಾಣಿ, ಅರುಣ್‌ ಶಹಾಪುರ ಅವರ ಸದಸ್ಯತ್ವ ಜುಲೈ 4ಕ್ಕೆ ಅಂತ್ಯಗೊಳ್ಳಲಿದೆ.

No Comments

Leave A Comment