Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

‘ನಾನು ಸತ್ತಿಲ್ಲ, ಸಮಾಧಿಯಾಗಿದ್ದೇನೆ, ಶೀಘ್ರ ನಿಮ್ಮೆದುರು ಬರುತ್ತೇನೆ’-ನಿತ್ಯಾನಂದ ಸ್ವಾಮಿ

ಬೆಂಗಳೂರು:ಮೇ 12. ನಾನು ಸತ್ತಿಲ್ಲ, ಸಮಾಧಿಯಾಗಿದ್ದೇನೆ. ನಿಮ್ಮ ಮುಂದೆ ಬಂದು ಮಾತನಾಡಲು ಇನ್ನೂ ನನಗೆ ಸಮಯ ಬೇಕು ಎಂದು ವಿವಾದಿತ ಸ್ವಯಂ ಘೋಷಿತ ಸ್ವಾಮಿ ನಿತ್ಯಾನಂದ ಫೇಸ್ಬುಕ್‌ನಲ್ಲಿ ಬರೆದುಕೊಂಡಿರುವುದು ಸದ್ಯ ವೈರಲ್ ಆಗಿದೆ.

ನಿತ್ಯಾನಂದ ಸ್ವಾಮಿ ಸತ್ತು ಹೋಗಿದ್ದಾರೆ ಎಂಬುದಾಗಿ ಜಾಲತಾಣಗಳಲ್ಲಿ ಕಳೆದ ಕೆಲವು ದಿನಗಳ ಹಿಂದೆ ಸುದ್ದಿಗಳು ಹರಿದಾಡುತ್ತಿದ್ದ ಬೆನ್ನಲ್ಲೇ ನಿತ್ಯಾನಂದ ಸ್ವಾಮಿ ಈ ಸ್ಪಷ್ಟನೆ ನೀಡಿದ್ದಾರೆ.

ತಮ್ಮದೇ ಕೈಲಾಸವನ್ನು ನಿರ್ಮಿಸಿಕೊಂಡು ಭಾರೀ ಸುದ್ದಿಯಾಗಿದ್ದ ನಿತ್ಯಾನಂದ ಸ್ವಾಮಿ ಕೆಲ ದಿನಗಳ ಹಿಂದೆ ಯಾವುದೇ ಹೇಳಿಕೆ, ಫೋಟೋ, ವೀಡಿಯೋಗಳನ್ನು ಬಿಡುಗಡೆ ಮಾಡಿರಲಿಲ್ಲ. ಈ ಕಾರಣಕ್ಕಾಗಿ ನಿತ್ಯಾನಂದ ಸ್ವಾಮಿ ಸತ್ತು ಹೋಗಿದ್ದಾರೆ ಎಂಬುದಾಗಿ ಕೆಲವರು ಸುದ್ದಿ ಹರಡಿಸಿದ್ದರು. ಇದನ್ನು ನೋಡಿದ ನಿತ್ಯಾನಂದ ನಿತ್ಯಾನಂದ ಸ್ವಾಮಿ, ‘ಕೈಲಾಸ್ ಅವತಾರ್ ಕ್ಲಿಕ್ಸ್’ ಎಂಬ ಫೇಸ್​ಬುಕ್ ಪೇಜ್​ನಲ್ಲಿ ತಾನು ಸತ್ತಿಲ್ಲ ಎಂಬುದನ್ನು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ. ಶಿವ ಶಿವಾ ನಾನು ಸತ್ತಿಲ್ಲ, ಕೈಲಾಸದಲ್ಲಿಯೇ ಇದ್ದು ಸಮಾಧಿಯಾಗಿದ್ದೇನೆ. ಆರೋಗ್ಯವಾಗಿಯೂ ಇದ್ದೇನೆ. ಆದರೆ ನನ್ನ ಕೆಲವು ವಿರೋಧಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಸ್ವಲ್ಪ ಸಮಯದ ಬಳಿಕ ನಿಮ್ಮ ಮುಂದೆ ಬಂದು ಮಾತನಾಡುತ್ತೇನೆ. ಸತ್ಸಂಗಕ್ಕೂ ಸಮಯ ಬೇಕು ಎಂದು ಬರೆದುಕೊಂಡಿದ್ದಾರೆ.

ನಾನು ಜೀವಂತವಾಗಿರುವ ಬಗ್ಗೆ ಯಾರಿಗಾದರೂ ಗೊಂದಲಗಳಿದ್ದರೆ ತಿರುಮಣ್ಣಾಮಲೈ ಅರುಣಗಿರಿಯ ಯೋಗೇಶ್ವರ ಸಮಾಧಿಗೆ ಹೋಗಿ ದೀಪ ಬೆಳಗಿಸಿ. ಅಲ್ಲಿ ನಾನು ಸ್ಪಷ್ಟವಾಗಿ ಗೋಚರಿಸುತ್ತೇನೆ. ನಾನು ನೀಡಿರುವ ಫೋಟೋಗಳು ಅಥವಾ ಈ ಪೋಸ್ಟ್ ಸುಳ್ಳು ಎಂದು ಯಾರಿಗಾದರೂ ಅನುಮಾನ ಬಂದರೆ ಅಂತಹವರು ಕೂಡಾ ದೀಪ ಬೆಳಗಿಸಲಿ. ಆಗ ನಿಮಗೇ ಸಾಕ್ಷಿ ಸಿಗುತ್ತದೆ ಎಂದಿದ್ದಾರೆ.
ಕೈಲಾಸದಲ್ಲಿ ಶಿವಪೂಜೆ ನಿತ್ಯ ನಡೆಯುತ್ತಿದೆ. ನಿಮ್ಮೆಲ್ಲರನ್ನು ನಾನು ಪ್ರೀತಿಸುತ್ತೇನೆ. ಸದ್ಯ 27 ಮಂದಿ ವೈದ್ಯರು ಮತ್ತು ಭಕ್ತರು ನನ್ನ ಜೊತೆಗಿದ್ದು, ಅವರೆಲ್ಲರು ಸೂಪರ್ ಕಾನ್​ಶ್ಯಿಯಸ್​ನೆಸ’ ಕುರಿತು ಸಂಶೋಧನೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

No Comments

Leave A Comment