Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ದುಬೈನಲ್ಲಿ ಶಿವಸೇನಾ ಶಾಸಕ ರಮೇಶ್ ಲಟ್ಕೆ ಹೃದಯಾಘಾತದಿಂದ ಸಾವು

ಮುಂಬೈ: ಶಿವಸೇನೆ ಶಾಸಕ ರಮೇಶ್ ಲಟ್ಕೆ ಅವರು ದುಬೈನಲ್ಲಿ ಬುಧವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅವರು ಸ್ನೇಹಿತನನ್ನು ಭೇಟಿಯಾಗಲು ಅಲ್ಲಿಗೆ ತೆರಳಿದ್ದರು ಎಂದು ತಿಳಿದುಬಂದಿದೆ. ಮುಂಬೈನ ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ರಮೇಶ್ ಲಟ್ಕೆ ಅವರಿಗೆ 52 ವರ್ಷ ವಯಸ್ಸಾಗಿತ್ತು. ನಿಧನ ಸುದ್ದಿಯನ್ನು ಸಾರಿಗೆ ಸಚಿವ ಅನಿಲ್ ಪರಬ್ ಪ್ರಕಟಿಸಿದ್ದಾರೆ.

ಲಟ್ಕೆ ತಮ್ಮ ಕುಟುಂಬದವರೊಂದಿಗೆ ಶಾಪಿಂಗ್‌ಗೆ ತೆರಳಿದ್ದ ಸಂದರ್ಭದಲ್ಲಿ ಸಾವನ್ನಪ್ಪಿದ್ದಾರೆ. ಈಗ ನಾವು ಅವರ ಮೃತದೇಹವನ್ನು ಭಾರತಕ್ಕೆ ಕರೆತರಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಮಾಹಿತಿ ನೀಡಿದರು.

2014 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುರೇಶ್ ಶೆಟ್ಟಿ ಅವರನ್ನು ಸೋಲಿಸಿ ರಮೇಶ್, ಮೊದಲ ಬಾರಿಗೆ ಅಂಧೇರಿ ಪೂರ್ವದಿಂದ ಶಾಸಕರಾದರು.

ಇದರ ನಂತರ, 2019 ರಲ್ಲಿ, ರಮೇಶ್ ಲಟ್ಕೆ ಅವರು ಸ್ವತಂತ್ರ ಅಭ್ಯರ್ಥಿ ಎಂ ಪಟೇಲ್ ಅವರನ್ನು
ಸೋಲಿಸುವ ಮೂಲಕ ಎರಡನೇ ಬಾರಿಗೆ ಶಾಸಕರಾಗಿ ಗೆದ್ದರು. ರಮೇಶ್ ಲಟ್ಟೆ ಅವರು ಬಿಎಂಸಿಯಲ್ಲಿ ಹಲವಾರು ಬಾರಿ ಕೌನ್ಸಿಲರ್ ಆಗಿದ್ದರು.

No Comments

Leave A Comment