Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಉಡುಪಿ: ಆತ್ರಾಡಿ ಮದಗದಲ್ಲಿ ತಾಯಿ – ಮಗಳ ಮೃತದೇಹ ಪತ್ತೆ, ಅಸಹಜ ಸಾವು ಪ್ರಕರಣ ದಾಖಲು

ಉಡುಪಿ:ಮೇ, 09. ಉಡುಪಿಯ ಆತ್ರಾಡಿ ಮದಗದ ಬಳಿ ಇರುವ ಮನೆಯೊಂದರಲ್ಲಿ ತಾಯಿ ಮಗಳ ಶವ ಪತ್ತೆಯಾಗಿದ್ದು , ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ಮೃತರನ್ನು ತಾಯಿ ಚೆಲುವಿ(30) ಮಗಳು ಪ್ರಿಯಾ (10) ಎಂದು ಗುರುತಿಸಲಾಗಿದೆ.

ಮನೆಯ ಕೋಣೆಯಲ್ಲಿ ತಾಯಿ – ಮಗಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು , ಮೃತದೇಹಗಳ ಬಾಯಿಯಲ್ಲಿ ರಕ್ತದ ಕಲೆ ಕಂಡುಬಂದಿರುವುದು ಸಂಶಯಕ್ಕೆ ಎಡೆಮಾಡಿದೆ.

ಮಣಿಪಾಲ ಖಾಸಗಿ ಸಂಸ್ಥೆಯಲ್ಲಿ ಹೌಸ್ಕೀಪಿಂಗ್ ಕೆಲಸ ಮಾಡುತ್ತಿದ್ದ ಮಹಿಳೆ, ಮಗಳೊಂದಿಗೆ ವಾಸವಾಗಿದ್ದರು. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಮತ್ತುಎಫ್ ಎಸ್ ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸ್ಥಳಕ್ಕೆ ಭೇಟಿ ನೀಡಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಲಿಂಗಪ್ಪ ಭೇಟಿ ನೀಡಿದ್ದಾರೆ.

No Comments

Leave A Comment